ದೆಹಲಿಯಲ್ಲಿ ಲಾಕ್​ಡೌನ್ ಮತ್ತೊಂದು ವಾರ ಮುಂದುವರಿಕೆ!

masthmagaa.com:

ದೆಹಲಿಯಲ್ಲಿ ಮತ್ತೊಂದು ವಾರ, ಅಂದ್ರೆ ಮೇ 3ರವರೆಗೆ ಲಾಕ್​ಡೌನ್ ಮುಂದುವರಿಸಲು ನಿರ್ಧರಿಸಲಾಗಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಲಾಕ್​ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ. ದೆಹಲಿಯಲ್ಲಿ ಕಳೆದೊಂದು ವಾರದಿಂದ ಲಾಕ್​ಡೌನ್​​ ಜಾರಿಯಲ್ಲಿತ್ತು. ಆದ್ರೂ ಕೂಡ ಕೊರೋನಾ ನಿಯಂತ್ರಣ ಸಾಧ್ಯವಾಗಿಲ್ಲ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೇ, ಆಕ್ಸಿಜನ್ ಸಿಗದೇ ಜನ ಪ್ರಾಣ ಕಳೆದುಕೊಳ್ತಿದ್ಧಾರೆ. ಹೀಗಾಗಿ ಇವತ್ತು ಮತ್ತೆ ಸುದ್ದಿಗೋಷ್ಠಿ ನಡೆಸಿದ ಅರವಿಂದ್ ಕೇಜ್ರಿವಾಲ್, ಕೊರೋನಾ ನಿಯಂತ್ರಣ ಸಾಧ್ಯವಾಗಿಲ್ಲ. ಕೊರೋನಾ ವಿರುದ್ಧ ಹೋರಾಟಕ್ಕೆ ಇರೋ ಕಡೆಯ ಅಸ್ತ್ರ ಅಂದ್ರೆ ಅದು ಲಾಕ್​ಡೌನ್​​​.. ಹೀಗಾಗಿ ಲಾಕ್​ಡೌನ್ ವಿಸ್ತರಣೆ ಮಾಡೋದು ಅನಿವಾರ್ಯವಾಗಿದೆ ಅಂತ ತಿಳಿಸಿದ್ರು. ದೆಹಲಿಯಲ್ಲಿ ನಿನ್ನೆ ಒಂದೇ ದಿನ 74 ಸಾವಿರ ಕೊರೋನಾ ಪರೀಕ್ಷೆ ಪೈಕಿ, 24 ಸಾವಿರ ಮಂದಿಗೆ ಸೋಂಕು ತಗುಲಿದೆ. ಅಂದ್ರೆ ಪರೀಕ್ಷೆಗೊಳಪಟ್ಟ ಪ್ರತಿ 3 ಜನರ ಪೈಕಿ ಒಬ್ಬರಿಗೆ ಕೊರೋನಾ ಸೋಂಕು ದೃಢವಾಗ್ತಿದೆ.

-masthmagaa.com

Contact Us for Advertisement

Leave a Reply