ವಿಶ್ವದಲ್ಲಿ ಒಮೈಕ್ರಾನ್ ಭೀತಿ: ಇವತ್ತು ಎಲ್ಲಿ ಏನೇನಾಯ್ತು?

masthmagaa.com:

ಒಮೈಕ್ರಾನ್ ಬೆನ್ನಲ್ಲೇ ಯುನೈಟೆಡ್ ಕಿಂಗ್​ಡಮ್​​ನಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 1.22 ಲಕ್ಷ ಮಂದಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಇದು ಕೊರೋನಾ ಮೊದಲು ಪತ್ತೆಯಾದ ಬಳಿಕ ಈವರೆಗಿನ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಕಳೆದೊಂದು ವಾರದಲ್ಲಿ ಯುನೈಟೆಡ್​​ ಕಿಂಗ್​ಡಮ್​​ನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ 48 ಪರ್ಸೆಂಟ್ ಜಾಸ್ತಿಯಾಗಿದೆ. ಆದ್ರೆ ಕೊರೋನಾದಿಂದ ಬಲಿಯಾಗ್ತಿರೋರ ಸಂಖ್ಯೆಯಲ್ಲಿ ದೊಡ್ಡಮಟ್ಟದ ಏರಿಕೆಯೇನೂ ಆಗ್ತಿಲ್ಲ.

ಇನ್ನು ಒಮೈಕ್ರಾನ್ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ 4ನೇ ಡೋಸ್ ಲಸಿಕೆ ನೀಡಬೇಕು ಅಂತ ಆಸ್ಟ್ರಿಯಾ ನ್ಯಾಷನಲ್ ವ್ಯಾಕ್ಸಿನೇಷನ್ ಬೋರ್ಡ್​​ ತಿಳಿಸಿದೆ. ಆದ್ರೆ ಎಲ್ಲರಿಗೂ 4ನೇ ಡೋಸ್​ ನೀಡಲು ಸದ್ಯ ಸಾಕಷ್ಟು ದಾಖಲೆಗಳಿಲ್ಲ. ಆದ್ರೆ ಆರೋಗ್ಯ ಕಾರ್ಯಕರ್ತರಿಗೆ ರಿಸ್ಕ್​ ಜಾಸ್ತಿ ಇರೋದ್ರಿಂದ ಶಿಫಾರಸು ಮಾಡಿದ್ದೀವಿ ಅಂತ ಕೂಡ ಸಂಸ್ಥೆ ತಿಳಿಸಿದೆ.

ಒಮಿಕ್ರಾನ್ ಪತ್ತೆಯಾಗ್ತಿದ್ದಂತೆ ಆಫ್ರಿಕಾ ಖಂಡದ ಹಲವು ದೇಶಗಳ ಮೇಲೆ ವಿಧಿಸಿದ್ದ ಪ್ರಯಾಣ ನಿರ್ಬಂಧವನ್ನು ಅಮೆರಿಕ ಮುಂದಿನ ವಾರ ತೆರವುಗೊಳಿಸೋದಾಗಿ ಘೋಷಿಸಿದೆ. ಈ ರೀತಿ ನಿರ್ಬಂಧ ವಿಧಿಸಿದ್ದಕ್ಕೆ ದಕ್ಷಿಣ ಆಫ್ರಿಕಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ ವಿರೋಧ ವ್ಯಕ್ತಪಡಿಸಿತ್ತು.

-masthmagaa.com

Contact Us for Advertisement

Leave a Reply