ಕೊರೋನಾ ಸದ್ಯದಲ್ಲೇ ಮಾಯವಾಗುತ್ತೆ: ಅಮೆರಿಕದ ಖ್ಯಾತ ವೈರಾಣು ತಜ್ಞ

masthmagaa.com:

ಕೊರೋನಾ ಶಾಶ್ವತವಾಗಿ ಹೀಗೇ ಇರೋದಿಲ್ಲ.. ಸದ್ಯದಲ್ಲೇ ಮಾಯವಾಗಲಿದೆ ಅಂತ ಅಮೆರಿಕದ ವೈರಾಣು ತಜ್ಞ ಡಾ.ಕುತುಬ್ ಮೊಹ್ಮದ್ ಹೇಳಿದ್ದಾರೆ. ಈ ಚೆಸ್​ ಗೇಮ್​​ನಲ್ಲಿ ಯಾರೂ ವಿನ್ನರ್ ಇಲ್ಲ.. ವೈರಾಣು ಮತ್ತು ನಮ್ಮ ನಡುವಿನ ಹೋರಾಟ ಡ್ರಾ ಆಗಲಿದೆ. ವೈರಾಣು ಕದ್ದು ಕೂರಲಿದ್ದು, ಒಂದು ರೀತಿಯಲ್ಲಿ ನಾವೇ ಗೆದ್ದಂತಾಗುತ್ತೆ. ಶೀಘ್ರದಲ್ಲೇ ಈ ಮಹಾಮಾರಿಯ ಕರಿನೆರಳಿನಿಂದ ಹೊರಬರ್ತೀವಿ. ಈ ವರ್ಷ ನಾವು ಮುಂದೆ ಸಾಗ್ತೀವಿ ಅಂತ ಹೇಳಿದ್ದಾರೆ. ನಮ್ಮ ರೋಗ ನಿರೋಧಕ ಶಕ್ತಿಯಲ್ಲಿ ಬದಲಾವಣೆಯಾಗ್ತಿದ್ದು, ಇದೇ ಕಾರಣಕ್ಕೆ ಕೊರೋನಾ ಬೇರೆ ಬೇರೆ ರೂಪ ಧರಿಸಿಕೊಂಡು ಬರ್ತಿದೆ. ಇದು ಚೆಸ್ ಆಟ ಇದ್ದಂತೆ.. ನಮ್ಮನ್ನ ಸೋಲಿಸಲು ಕೊರೋನಾ ರೂಪಾಂತರಗೊಳ್ತಿದೆ. ಅದೇ ರೀತಿ ನಾವು ಮಾಸ್ಕ್​, ಸ್ಯಾನಿಟೈಸರ್, ಕೊರೋನಾ ಲಸಿಕೆಯನ್ನು ಆಯುಧವಾಗಿ ಬಳಸ್ತಿದ್ದೀವಿ ಅಂತ ಕೂಡ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply