ಕೊರೋನಾದಿಂದ ಬಡವರಾದೋರು ಎಷ್ಟು ಜನ ಗೊತ್ತಾ?

masthmagaa.com:

ಕೊರೋನಾ ಬಂದ ಬಳಿಕ ಕೆಲಸ ಮಾಡ್ಕೊಂಡು ಚೆನ್ನಾಗಿದ್ದ 10.8 ಕೋಟಿ ಮಂದಿ, ಕೆಲಸ ಕಳ್ಕೊಂಡು ಬಡವರು ಅಥವಾ ಕಡು ಬಡವರಾಗಿದ್ದಾರೆ ಅಂತ ವಿಶ್ವಸಂಸ್ಥೆಯ ಹೊಸ ವರದಿ ಹೇಳಿದೆ. 2023ರ ವೇಳೆಗೆ ಈ ಸಂಖ್ಯೆ 20 ಕೋಟಿಗೆ ಏರಿಕೆಯಾಗಲಿದ್ದು, ಅಷ್ಟು ಜನ ಕೆಲಸ ಕಳೆದುಕೊಳ್ಳೋ ಸಾಧ್ಯತೆ ಇದೆ ಅಂತ ಎಚ್ಚರಿಸಿದೆ. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ World Employment and Social Outlook ವರದಿಯಲ್ಲಿ ಈ ವಿಚಾರ ಗೊತ್ತಾಗಿದೆ. ಕಾಯಿಲೆಯಿಂದಾಗಿ ಈ ವರ್ಷಾಂತ್ಯದವರೆಗೆ ಏಳೂವರೆ ಕೋಟಿಯಷ್ಟು ಉದ್ಯೋಗ ಕಡಿಮೆಯಾಗುತ್ತೆ. 2022ರ ಅಂತ್ಯದ ವೇಳೆಗೆ ಉದ್ಯೋಗದ ಪ್ರಮಾಣ ಮತ್ತೂ 2.3 ಕೋಟಿಯಷ್ಟು ಕಡಿಮೆಯಾಗುತ್ತೆ ಅಂತ ಈ ವರದಿ ಹೇಳಿದೆ.

-masthmagaa.com

Contact Us for Advertisement

Leave a Reply