masthmagaa.com:

ಜನವರಿ 16ನೇ ತಾರೀಖಿನಿಂದ ದೇಶದಲ್ಲಿ ಕೊರೋನಾ ಲಸಿಕೆ ಚುಚ್ಚೋ ಕಾರ್ಯಕ್ರಮವೇನೋ ಶುರುವಾಗ್ತಿದೆ. ಆದ್ರೆ ಲಸಿಕೆ ಬಗ್ಗೆ ಹಲವರಿಗೆ ಭಯ, ಅನುಮಾನವಿದೆ. ಜನರಲ್ಲಿರುವ ಈ ಭಯವನ್ನ ಹೋಗಲಾಡಿಸಲು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​ನ 3.5 ಲಕ್ಷ ಸದಸ್ಯರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಸಲಿಕೆ ಹಾಕಿಸಿಕೊಳ್ಳಬೇಕು ಅಂತ ಇಂಡಿಯನ್ ಮೆಡಿಕಲ್​ ಅಸೋಸಿಯೇಷನ್ (IMA) ಮನವಿ ಮಾಡಿದೆ. ಈ ಮೂಲಕ ಇಡೀ ವಿಶ್ವಕ್ಕೆ ಕೊರೋನಾ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಅಂತ ತೋರಿಸಿಕೊಡಬೇಕು ಎಂದಿದೆ. ಜೊತೆಗೆ ಲಸಿಕೆ ಹಾಕಿಸಿಕೊಂಡ ಬಳಿಕವೂ ಮಾಸ್ಕ್ ಧರಿಸೋದು, ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು ಸೇರಿದಂತೆ ಕೊರೋನಾ ನಿಯಮಗಳನ್ನ ಪಾಲಿಸುವಂತೆ ದೇಶದ ಜನರಲ್ಲಿ ಆಗ್ರಹಿಸಿದೆ. ಅಂದ್ಹಾಗೆ ಭಾರತದಲ್ಲಿ ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್​ಲೈನ್​ ವರ್ಕರ್ಸ್​ಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ.

-masthmagaa.com

Contact Us for Advertisement

Leave a Reply