masthmagaa.com:

ದೇಶದಲ್ಲಿ ಮೊದಲ ಹಂತದ ಕೊರೋನಾ ಲಸಿಕೆ ಅಭಿಯಾನ ಜೋರಾಗಿ ನಡೀತಿದೆ. ಭಾರತದಲ್ಲಿ ಸದ್ಯ ಹಾಕುತ್ತಿರೋ ಕೋವಿಶೀಲ್ಡ್​ ಮತ್ತು ಕೋವಾಕ್ಸಿನ್​ ಲಸಿಕೆಗಳು ಎರಡು ಡೋಸ್​ನ ಲಸಿಕೆಯಾಗಿವೆ. ಕೋವಿಶೀಲ್ಡ್​​ದು ಎರಡು ಡೋಸ್ ಇರುತ್ತೆ, ಕೋವಾಕ್ಸಿನ್​ದು ಕೂಡ ಎರಡು ಡೋಸ್ ಇರುತ್ತೆ. ಈಗ ಹಾಕಿರೋದು ಒಂದು ಡೋಸ್ ಮಾತ್ರ. ಇದೀಗ ಫೆಬ್ರವರಿ 13ರಿಂದ ಕೊರೋನಾ ಲಸಿಕೆಯ ಎರಡನೇ ಡೋಸ್​ ಹಾಕಲಾಗುತ್ತೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಈಗಾಗಲೇ ಯಾವೆಲ್ಲಾ ಆರೋಗ್ಯ ಕಾರ್ಯಕರ್ತರು ಕೊರೋನಾ ಲಸಿಕೆಯ ಮೊದಲ ಡೋಸ್ ಚುಚ್ಚಿಸಿಕೊಂಡಿದ್ದಾರೋ ಅವರು ಎರಡನೇ ಡೋಸ್ ಹಾಕಿಸಿಕೊಳ್ಳಬೇಕು. ಎರಡೂ ಡೋಸ್​ ಹಾಕಿದ ಬಳಿಕವಷ್ಟೇ ಕೊರೋನಾದಿಂದ ಅವರಿಗೆ ರಕ್ಷಣೆ ಸಿಗುತ್ತೆ.

-masthmagaa.com

Contact Us for Advertisement

Leave a Reply