ನಿಮ್ಗೆ 60 ವರ್ಷ ದಾಟಿದ್ರೆ, ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ರೆ ಮಾರ್ಚ್​ 1ರಿಂದ ಉಚಿತ ಲಸಿಕೆ

masthmagaa.com:

ಭಾರತದಲ್ಲಿ ಕೊರೋನಾ ಲಸಿಕೆಯ ಎರಡನೇ ಹಂತ ಮಾರ್ಚ್​ 1ರಿಂದ ಆರಂಭವಾಗಲಿದೆ ಅಂತ ಕೇಂದ್ರ ಸರ್ಕಾರ ಘೋಷಿಸಿದೆ. ಈ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರೋ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತೆ. ಇವರೆಲ್ಲರಿಗೂ ಕೊರೋನಾ ಲಸಿಕೆಯನ್ನ ಫ್ರೀಯಾಗಿ ನೀಡಲಾಗುತ್ತೆ. ಸೋ ನಿಮ್ಮ ಮನೆಯಲ್ಲಿ 60 ವರ್ಷ ಮೇಲ್ಪಟ್ಟವರು ಯಾರಾದ್ರೂ ಇದ್ರೆ ಅಥವಾ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರೋ 45 ವರ್ಷ ಮೇಲ್ಪಟ್ಟವರು ಯಾರಾದ್ರೂ ಇದ್ರೆ ಲಸಿಕೆ ಚುಚ್ಚಿಸಿಕೊಳ್ಳಲು ರೆಡಿಯಾಗಿ. ಒಟ್ಟು 10,000ಕ್ಕೂ ಹೆಚ್ಚು ಸರ್ಕಾರಿ ಆಸ್ಪತ್ರೆ ಮತ್ತು 20,000ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಚುಚ್ಚಲಾಗುತ್ತೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಚುಚ್ಚಿಸಿಕೊಳ್ಳೋರು ಒಂದಷ್ಟು ದುಡ್ಡು ಕೊಡಬೇಕು. ಇಂಜೆಕ್ಷನ್​ ಚಾರ್ಜ್​, ಸ್ಟಾಫ್ ಚಾರ್ಚ್​, ಇತ್ಯಾದಿ. ಅದೆಷ್ಟು ಅಂತ ಉತ್ಪಾದಕರು ಮತ್ತು ಆಸ್ಪತ್ರೆಗಳ ಜೊತೆ ಚರ್ಚಿಸಿ ಮೂರ್ನಾಲ್ಕು ದಿನಗಳಲ್ಲಿ ತಿಳಿಸಲಾಗುತ್ತೆ ಅಂತಾನೂ ಕೇಂದ್ರ ಸರ್ಕಾರ ಹೇಳಿದೆ. ಇನ್ನು ನಂಗೆ ಇದೇ ಲಸಿಕೆ ಬೇಕು, ಆ ಲಸಿಕೆ ಬೇಡ ಅಂತ ಲಸಿಕೆಯನ್ನ ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆಯಾ ಅಂದ್ರೆ, ಇಲ್ಲ.. ಭಾರತದ ಎರಡೂ ಲಸಿಕೆಗಳು ಸೇಫ್ ಮತ್ತು ಎಫೆಕ್ಟಿವ್ ಅಂತ ಕೇಂದ್ರ ಸರ್ಕಾರ ಹೇಳಿದೆ. ಇನ್ನು ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವರು, ವಿವಿಧ ರಾಜ್ಯದ ಸಿಎಂಗಳು, ರಾಜಕಾರಣಿಗಳು ಕೂಡ ಇದೇ ಏಜ್​ ಗ್ರೂಪ್​ನಲ್ಲಿ ಬರೋದ್ರಿಂದ ಅವರು ಕೂಡ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ. ಪ್ರಧಾನಿ ಮೋದಿ ಮಾರ್ಚ್​ 1ರಂದೇ ಲಸಿಕೆ ಚುಚ್ಚಿಸಿಕೊಳ್ಳೋ ಸಾಧ್ಯತೆ ಇದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply