ತಜ್ಞರ ಸಲಹೆ ಪಡೆದೇ ಕೊರೋನಾ ಲಸಿಕೆ ಡೋಸ್ ಅವಧಿ ವಿಸ್ತರಣೆ: ಕೇಂದ್ರ

masthmagaa.com:

ಕೋವಿಶೀಲ್ಡ್​ ಲಸಿಕೆಯ ಎರಡು ಡೋಸ್​​ಗಳ ನಡುವಿನ ಅಂತರವನ್ನು ತಜ್ಞರ ಸಲಹೆ ಪಡೆಯದೇ ವಿಸ್ತರಣೆ ಮಾಡಲಾಗಿದೆ ಅನ್ನೋ ಆರೋಪಕ್ಕೆ ಕೇಂದ್ರ ಸರ್ಕಾರ ಇವತ್ತು ಪ್ರತಿಕ್ರಿಯೆ ಕೊಟ್ಟಿದೆ. ಈ ಬಗ್ಗೆ ಮಾತನಾಡಿರೋ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​​, ಕೋವಿಶೀಲ್ಡ್ 2 ಡೋಸ್​ಗಳ ನಡುವಿನ ಅಂತರವನ್ನು ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ, ಪಾರದರ್ಶಕವಾಗಿ ವಿಸ್ತರಿಸಲಾಗಿದೆ. ಆದ್ರೆ ಈ ವಿಚಾರವನ್ನೂ ರಾಜಕೀಯಗೊಳಿಸಿರೋದು ದುರದೃಷ್ಟಕರ ಅಂತ ಹೇಳಿದ್ದಾರೆ. ನಿನ್ನೆಯಷ್ಟೇ National Technical Advisory Group on Immunization ಮುಖ್ಯಸ್ಥ ಎನ್​​​​.ಕೆ ಅರೋರ ಕೂಡ ಇದೇ ಮಾತನ್ನ ಹೇಳಿದ್ರು.

-masthmagaa.com

Contact Us for Advertisement

Leave a Reply