ಲಸಿಕೆ ಪಡೆದ 95% ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ!

masthmagaa.com:

ಭಾರತದಲ್ಲಿ ಲಸಿಕೆ ಅಭಿಯಾನದಲ್ಲಿ ಹಾಕಲಾಗ್ತಿರೋ ಪ್ರಮುಖ ಎರಡು ಲಸಿಕೆಗಳಾದ ಕೋವಿಶೀಲ್ಡ್​ ಮತ್ತು ಕೋವ್ಯಾಕ್ಸಿನ್ ಲಸಿಕೆ ಪಡೆದ ಶೇ.95ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿದೆ ಅಂತ ಅಧ್ಯಯನವೊಂದ್ರಲ್ಲಿ ಗೊತ್ತಾಗಿದೆ. ಆದ್ರೆ ಕೋವ್ಯಾಕ್ಸಿನ್​​ಗೆ ಹೋಲಿಸಿದ್ರೆ ಕೋವಿಶೀಲ್ಡ್​​ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಸ್ವಲ್ಪ ಹೆಚ್ಚು ಕಂಡು ಬಂದಿದೆ. ದೇಶದಾದ್ಯಂತ 15 ರಾಜ್ಯಗಳ 22 ನಗರಗಳಲ್ಲಿ ಲಸಿಕೆ ಪಡೆದ 515 ಮಂದಿ ಆರೋಗ್ಯಕರ್ತರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರ ಪೈಕಿ 425 ಮಂದಿ ಮಂದಿ ಮತ್ತು ಕೋವ್ಯಾಕ್ಸಿನ್ ಪಡೆದ 90 ಮಂದಿ ಇದ್ರು. ಇವರಲ್ಲಿ ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡ ಶೇ.95ರಷ್ಟು ಮಂದಿಯಲ್ಲಿ 21ರಿಂದ 36 ದಿನಗಳಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿರೋದು ಪತ್ತೆಯಾಗಿದೆ. ಆದ್ರೆ ಕೋವಿಶೀಲ್ಡ್ ಹಾಕಿಸಿಕೊಂಡವರ ಪೈಕಿ ಶೇ.98ರಷ್ಟು ಮಂದಿಯಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದ್ರೆ, ಕೋವ್ಯಾಕ್ಸಿನ್ ಹಾಕಿಸಿಕೊಂಡವರ ಪೈಕಿ 80ರಷ್ಟು ಮಂದಿಯಲ್ಲಿ ರೋಗ ನಿರೋಧಕ ಶಕ್ತಿ ಪತ್ತೆಯಾಗಿದೆ. MedRxiv ವೆಬ್​ಸೈಟ್​​ನಲ್ಲಿ ಜೂನ್ 4ರಂದು ಈ ವರದಿ ಪ್ರಕಟಿಸಲಾಗಿದೆ.

-masthmagaa.com:

 

Contact Us for Advertisement

Leave a Reply