ಲಸಿಕೆಯ 2 ಡೋಸ್ ನಡುವೆ ಗ್ಯಾಪ್ ಜಾಸ್ತಿ ಆದಷ್ಟು ಒಳ್ಳೇದು!

masthmagaa.com:

ಜಗತ್ತಿನ ಹಲವು ದೇಶಗಳಲ್ಲಿ ಕೊರೋನಾ ಲಸಿಕೆಯ ಕೊರತೆ ಇದೆ.. ಹೀಗಾಗಿ ಹಲವು ದೇಶಗಳು ಮೊದಲ ಮತ್ತು 2ನೇ ಡೋಸ್ ನಡುವಿನ ಅಂತರವನ್ನು ಜಾಸ್ತಿ ಮಾಡ್ತಿವೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಕೋವಿಶೀಲ್ಡ್​ ಎರಡು ಡೋಸ್​​ಗಳ ನಡುವಿನ ಅಂತರವನ್ನು 12ರಿಂದ 16 ವಾರಗಳಿಗೆ ಏರಿಕೆ ಮಾಡಿತ್ತು. ಆದ್ರೆ ಇದು ರಾಜಕೀಯ ವಿರೋಧಗಳಿಗೂ ಕಾರಣವಾಗ್ತಿದೆ. ಆದ್ರೀಗ ಬ್ಲೂಂಬರ್ಗ್​​ನಲ್ಲಿ ಪ್ರಕಟವಾದ ವರದಿಯೊಂದ್ರ ಪ್ರಕಾರ ಕೊರೋನಾ ಲಸಿಕೆಯ 2 ಡೋಸ್​​ಗಳ ನಡುವೆ ಅಂತರ ಹೆಚ್ಚಿಸೋದ್ರಿಂದ ರೋಗ ನಿರೋಧಕ ಶಕ್ತಿ ಇನ್ನಷ್ಟು ಹೆಚ್ಚಾಗುತ್ತೆ.. ಮೊದಲ ಡೋಸ್ ಪಡೆದ ಬಳಿಕ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗೋಕೆ ಶುರುವಾಗುತ್ತೆ. ಈ ಕ್ರಿಯೆಗೆ ಎಷ್ಟು ಸಮಯ ಕೊಟ್ರೂ ಒಳ್ಳೆಯದೇ. ಹೀಗಾಗಿ 2ನೇ ಡೋಸ್ ಅಂತರ ಹೆಚ್ಚಿಸೋದು ಒಳ್ಳೆಯದು ಅಂತ ಅಧ್ಯಯನ ಹೇಳಿದೆ. ಅಂದ್ರೆ ಇದು ಎಲ್ಲಾ ಲಸಿಕೆಗಳಿಗೆ ಸಂಬಂಧಿಸಿದಂತೆ ಮಾಡಲಾದ ಅಧ್ಯಯನವಾಗಿದೆ. ಭಾರತದಲ್ಲಿ ಸದ್ಯಕ್ಕೆ ಕೋವಿಶೀಲ್ಡ್​ ಲಸಿಕೆಯ 2 ಡೋಸ್ ನಡುವಿನ ಅಂತರವನ್ನು 12ರಿಂದ 16 ವಾರಕ್ಕೆ ಹೆಚ್ಚಿಸಲಾಗಿದೆ.

-masthmagaa.com

Contact Us for Advertisement

Leave a Reply