ಟೆಲಿಗ್ರಾಂನಲ್ಲಿ ಕೋವಿನ್ ಮಾಹಿತಿ ಸೋರಿಕೆ ಆರೋಪ: ತನಿಖೆಗೆ ಮುಂದಾದ ಸರ್ಕಾರ

masthmagaa.com:

ದೇಶದ ಕೋವಿಡ್ -19 ವ್ಯಾಕ್ಸಿನೇಷನ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ – CoWIN ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಜನರ ವೈಯಕ್ತಿಕ ವಿವರಗಳು ಸಾಮಾಜಿಕ ಮಾಧ್ಯಮ ವೇದಿಕೆ ಟೆಲಿಗ್ರಾಮ್‌ನಲ್ಲಿ ಸೋರಿಕೆಯಾಗಿದೆ ಎಂಬ ವರದಿಗಳನ್ನು ಸರ್ಕಾರ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. CoWINನಲ್ಲಿ ಸೈನ್ ಅಪ್ ಮಾಡಿದ ಹಲವಾರು ರಾಜಕಾರಣಿಗಳು, ಅಧಿಕಾರಿಗಳು ಮತ್ತು ವ್ಯಕ್ತಿಗಳ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನ ಟೆಲಿಗ್ರಾಮ್‌ನಲ್ಲಿ ಬಾಟ್‌ ಖಾತೆಯೊಂದ್ರಿಂದ ಹಂಚಿಕೊಳ್ಳಲಾಗಿದೆ ಅಂತ ವರದಿಯೊಂದು ಹೇಳಿತ್ತು. ಇದ್ರ ಬೆನ್ನಲ್ಲೇ ಸರ್ಕಾರ ತನಿಖೆ ನಡೆಸ್ತಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply