18 ವರ್ಷಕ್ಕೆ ವೋಟ್ ಹಾಕ್ಬೋದು, ಮದ್ವೆ ಯಾಕೆ ಆಗಬಾರ್ದು? ವಿಪಕ್ಷಗಳ ಆಕ್ರೋಶ

masthmagaa.com:

ಹೆಣ್ಮಕ್ಕಳ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಏರಿಸೊ ವಿಚಾರ ಕೂಡ ಈಗ ರಾಜಕೀಯದ ರೂಪ ಪಡ್ಕೊಳ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೀ ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವತಿ 18 ವರ್ಷಕ್ಕೆ ಪ್ರಧಾನಿಯನ್ನು ಆಯ್ಕೆ ಮಾಡ್ಬೋದು ಅಂತಾದ್ರೆ ತನ್ನ ಜೀವನ ಸಂಗಾತಿಯ ಆಯ್ಕೆ ಯಾಕೆ ಮಾಡಿಕೊಳ್ಳಬಾರ್ದು ಅಂತ ಪ್ರಶ್ನಿಸಿದ್ದಾರೆ. ಕಾನೂನು ಪ್ರಕಾರ 18 ವರ್ಷ ದಾಟಿದ ಯುವತಿ ಜೊತೆ ಶಾರೀರಿಕ ಸಂಬಂಧ ಹೊಂದಬಹುದು. ಹಾಗಿದ್ಮೇಲೆ 18 ವರ್ಷಕ್ಕೆ ಮದ್ವೆ ಯಾಕ್ ಆಗ್ಬಾರ್ದು..? ಪ್ರಧಾನಿ ಮೋದಿಗೆ ಮದುವೆ ಜೊತೆ ಏನ್ ಪ್ರಾಬ್ಲಮ್ಮು ಅಂತ ಪ್ರಶ್ನಿಸಿದ್ದಾರೆ. ಜೊತೆಗೆ ಬರೀ ಹುಡುಗಿಯರಿಗೆ ಮಾತ್ರವಲ್ಲ.. ಹುಡುಗರ ಮದುವೆಯ ಕನಿಷ್ಠ ವಯಸ್ಸನ್ನೂ 18ಕ್ಕೆ ಇಳಿಸಬೇಕು ಅಂತ ಒವೈಸಿ ಹೇಳಿದ್ದಾರೆ. ಇದೇ ವಿಚಾರವಾಗಿ ಓವೈಸಿ ಪ್ರಧಾನಿ ಮೋದಿಯನ್ನು ಅಂಕಲ್​​ಗೆ ಹೋಲಿಸಿದ್ದಾರೆ. ಅಂದ್ರೆ ಸಾಮಾನ್ಯವಾಗಿ ಅಂಕಲ್​​ಗಳು ಸುಮ್ನೆ ಕೂತ್ಕೊಂಡು ಅದು ಇದು ಮಾತಾಡ್ತಾರೆ. ಅದು ಇದು ಕ್ವಶ್ಚನ್ ಕೇಳ್ತಾರೆ. ಈಗ ಮೋದಿ ಅಂಕಲ್, ಹೆಣ್ಮಕ್ಕಳಿಗೆ ಮದ್ವೆಯಾಗ್ಬೇಡಿ ಅಂತಿದ್ದಾರೆ. ಮೋದಿ ಜೀ.. ನೀವು ನಮ್ಮ ಅಂಕಲ್ ಆಗಿದ್ದು ಯಾವಾಗ ಅಂತ ಪ್ರಶ್ನಿಸಿದ್ದಾರೆ.

ಇನ್ನು ಸಮಾಜವಾದಿ ಪಕ್ಷದ ನಾಯಕರಂತೂ ಫಲವತ್ತತೆ, ಬಡತನ ಕಾರಣಗಳನ್ನು ನೀಡಿ ಹೆಣ್ಮಕ್ಕಳಿಗೆ ಬೇಗ ಮದ್ವೆ ಮಾಡ್ಬೇಕು ಅಂತ ಹೇಳಿದ್ದಾರೆ. ಸಮಾಜವಾದಿ ಪಕ್ಷದ ಸಂಸದ ಸೈಯ್ಯದ್ ತುಫೈಲ್ ಹಸನ್ ಮಾತಾಡಿ, ಹೆಣ್ಮಕ್ಕಳು 16 ವಯಸ್ಸಿಗೆ ಮೆಚ್ಯೂರ್ ಆಗ್ತಾರೆ. 16-17ರಿಂದ 30 ವರ್ಷದವರೆಗೆ ಅವರ ಫರ್ಟಿಲಿಟಿ ವಯಸ್ಸು ಇರುತ್ತೆ. ಲೇಟಾಗಿ ಮದ್ವೆ ಮಾಡಿದ್ರೆ 2 ಸಮಸ್ಯೆಯಾಗುತ್ತೆ.. ಒಂದು ಮಕ್ಕಳಾಗದಿರೋ ಸಮಸ್ಯೆ ಮತ್ತೊಂದು ಏಜ್ ಆದ ಬಳಿಕ ಮದುವೆಯಾಗಿ ಸೆಟಲ್ ಆಗೋಕೆ ಕಷ್ಟವಾಗುತ್ತೆ. ಈ ಮೂಲಕ ನಾವು ನೈಸರ್ಗಿಕ ಚಕ್ರವನ್ನು ಮುರಿಯುತ್ತಿದ್ದೀವಿ ಅಂತ ಹೇಳಿದ್ದಾರೆ. ಅದೇ ಪಕ್ಷದ ಮತ್ತೋರ್ವ ಸಂಸದ ಶಫೀಕುರ್​ ರೆಹ್ಮಾನ್​​, ಭಾರತ ಬಡದೇಶವಾಗಿದ್ರಿಂದ ಎಲ್ಲರೂ ಹೆಣ್ಮಕ್ಕಳಿಗೆ ಬೇಗನೇ ಮದ್ವೆ ಮಾಡ್ತಾರೆ. ಹೀಗಾಗಿ ನಾನು ಈ ಮಸೂದೆಗೆ ಬೆಂಬಲಿಸಲ್ಲ ಅಂತ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಲೇಟಾಗಿ ಮದ್ವೆ ಮಾಡಿದ್ರೆ ಹಾಳಾಗಿ ಹೋಗ್ತಾರೆ ಅಂತಿದ್ದಾರೆ. ಹಾಗಾದ್ರೆ ಇವರಿಗೆ ಹೆಣ್ಮಕ್ಕಳ ಮೇಲೆ ನಂಬಿಕೆ ಇಲ್ಲವೇ.. ಇದೆಂತಹ ಮನಸ್ಥಿತಿ? ಈ ಮನಸ್ಥಿತಿ ಹಿಂದೂಸ್ತಾನಿ ಆಗಿರಲು ಸಾಧ್ಯವೇ ಇಲ್ಲ. ಇದು ತಾಲಿಬಾನಿ ಮನಸ್ಥಿತಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply