ಅಮೆರಿಕದಲ್ಲಿ ಪತ್ತೆಯಾಯ್ತು 130 ವರ್ಷಗಳ ಹಿಂದಿನ ತಾಮ್ರದ ಬಾಕ್ಸ್!

masthmagaa.com:

ಅಮೆರಿಕದ ವರ್ಜೀನಿಯಾದಲ್ಲಿ ಜನರಲ್ ರಾಬರ್ಟ್​ ಇ ಲೀ ಅವರ ಪ್ರತಿಮೆಯ ತಳಭಾಗದಲ್ಲಿ 130 ವರ್ಷಗಳ ಹಿಂದೆ ಹುಗಿದಿಟ್ಟಿದ್ದ ತಾಮ್ರದ ಬಾಕ್ಸ್ ಒಂದು ಪತ್ತೆಯಾಗಿದೆ. ಜನರಲ್ ರಾಬರ್ಟ್​ ಇ ಲೀ ನಾಗರಿಕ ಯುದ್ದದ ವೇಳೆ ಹೋರಾಟದಲ್ಲಿ ಭಾಗಿಯಾಗಿದ್ರು. 1861-65ರವರೆಗೆ ನಡೆದ ನಾಗರಿಕ ಯುದ್ಧದ ನೆನಪಿನಲ್ಲಿ ಹುಗಿದಿಟ್ಟ ಟೈಂ ಕ್ಯಾಪ್ಸೂಲ್ ಇದಾಗಿರಬಹುದು ಅಂತ ವರ್ಜೀನಿಯಾ ಗವರ್ನರ್​ ರಾಲ್ಫ್​​ ನಾರ್ಥಮ್ ಟ್ವೀಟ್ ಮಾಡಿದ್ದಾರೆ. 1890ರಲ್ಲಿ ಇದನ್ನು ಹುಗಿದಿರಬಹುದು ಅಂತ ಅಂದಾಜಿಸಲಾಗಿದ್ದು, ಇದ್ರಲ್ಲಿ ಗೃಹಯುದ್ಧ ನೆನಪಿಸೋ ವಸ್ತುಗಳು, ಲಿಂಕನ್ ಫೋಟೋ, ಬುಲೆಟ್​​, ಕರೆನ್ಸಿ ಮತ್ತು ಮ್ಯಾಪ್​​ನಂತ ಹಲವು ವಸ್ತುಗಳು ಪತ್ತೆಯಾಗಿವೆ.

-masthmagaa.com

Contact Us for Advertisement

Leave a Reply