ಕ್ರಿಕೆಟ್‌ ಮ್ಯಾಚ್‌ ಫಿಕ್ಸಿಂಗ್‌ : ಬರುತ್ತಿದೆ ನೆಟ್‌ಫ್ಲಿಕ್ಸ್‌ ಡಾಕ್ಯುಮೆಂಟರಿ

masthmagaa.com:

ಮ್ಯಾಚ್‌ ಫಿಕ್ಸಿಂಗ್‌ ಬಗ್ಗೆ ಎಲ್ಲರೂ ಕೇಳಿರ್ತಿರಾ. ನಮ್ಮ ಕಣ್ಣೆದುರೆ ಒಂದು ಮ್ಯಾಚ್‌ ನಡಿಯತ್ತೆ, ನಾವ್‌ ಅಂದ್ಕೊಳ್ತೀವಿ ಅದು ಲೈವ್‌ ಮ್ಯಾಚ್‌ ಅಂತ ಆದರೆ ಆಲ್‌ರೆಡಿ ಆ ಮ್ಯಾಚಲ್ಲಿ ಯಾರು ವಿನ್‌ ಆಗಬೇಕು ಅಂತ ಮೊದಲೇ ಡಿಸೈಡ್‌ ಆಗಿರತ್ತೆ ಅಂತ ಯಾರಾದ್ರು ಯೋಚನೆ ಮಾಡಿದ್ರಾ?. ಮೊದಲೇ ಡಿಸೈಡ್‌ ಅಗಿರೋದನದನ್ನೇ ಮ್ಯಾಚ್‌ ಫಿಕ್ಸಿಂಗ್‌ ಅಂತಾರೆ. ಮ್ಯಾಚ್‌ ಫಿಕ್ಸಿಂಗ್‌ ಒಂದು ಹಗರಣ. ಈ ಹಗರಣದ ಬಗ್ಗೆ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಒಂದು ಟ್ರೇಲರ್‌ ರಿಲೀಸ್‌ ಆಗಿದೆ.

ಅದರ ಹೆಸರು “ಕಾಟ್‌ ಔಟ್‌” ಇದು ಒಂದು ಡಾಕ್ಯುಮೆಂಟರಿ ಮೂವಿ. ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತನ್ನು ಸ್ಟಂಪ್ ಮಾಡಿದ ‘ಅತಿದೊಡ್ಡ ಮ್ಯಾಚ್ ಫಿಕ್ಸಿಂಗ್ ಹಗರಣವನ್ನ ಸ್ಫೋಟಿಸುವ’ ಗುರಿಯನ್ನು ಈ ‘ಕಾಟ್ ಔಟ್’ ಹೊಂದಿದೆ. ನೆಟ್‌ಫ್ಲಿಕ್ಸ್ ತನ್ನ ಇತ್ತೀಚಿನ ಸಾಕ್ಷ್ಯಚಿತ್ರ ಕಾಟ್‌ ಔಟ್‌ನ ಕುತೂಹಲಕಾರಿ ಟ್ರೈಲರ್ ಅನ್ನು ಗುರುವಾರ ರಿಲೀಸ್‌ ಮಾಡಿದೆ. ಸೆನ್ಸೇಷನ್‌ ಕ್ರೀಯೆಟ್‌ ಮಾಡುವ ಈ ಡಾಕ್ಯುಮೆಂಟರಿ ಮೂವಿ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದ “ದೊಡ್ಡ ಮ್ಯಾಚ್ ಫಿಕ್ಸಿಂಗ್ ಹಗರಣದ ಬಗ್ಗೆ ಜನರನ್ನ ಎಚ್ಚರಿಸುವ ” ಗುರಿಯನ್ನು ಹೊಂದಿದೆ. ಎರಡು ನಿಮಿಷದ ಈ ಟ್ರೇಲರ್‌ನಲ್ಲಿ 90ರ ದಶಕದ ಒಬ್ಬ ಆಟಗಾರ ಭಾರತಕ್ಕಾಗಿ ಆಡಬೇಕು ಅನ್ನುವಂತ ಕನಸನ್ನ ಇಟ್ಕೊಂಡು ಬಂದಿರ್ತಾನೆ, ಆದರೆ ಮ್ಯಾಚ್‌ ಫಿಕ್ಸಿಂಗ್‌ ಅನ್ನೋದು ತಲೆ ಎತ್ತಿ, ಅವನ ಕನಸು ಹೇಗೆ ದುಸ್ವಪ್ನವಾಗಿ ಬದಲಾಯಿತು ಎನ್ನೋದು ಇದರ ಕತೆ.

“ಕ್ರೀಡೆ ಅನ್ನೋದು ಮುಂದೆ ಎನ್‌ ಆಗತ್ತೆ ಅನ್ನೋದನ್ನ ಊಹೆ ಮಾಡ್ಬೇಕೆ ವಿನಃ ಆ ಕ್ರೀಡೆ ಸ್ರ್ಕಿಪ್ಟ್‌ ಆಗಿರಬಾರದು. ಇಂತಹ ಘಟನೆಗಳು ಕ್ರೀಡೆಯ ವ್ಯಾಲ್ಯೂಗಳನ್ನ ಕಳೆದು ಬಿಡತ್ತೆ” ಅಂತ ಟ್ರೇಲರ್‌ನಲ್ಲಿ ನಿರೂಪಕರೊಬ್ಬರು ಹೇಳುತ್ತಾರೆ. ಅಲ್ಲದೇ ಇದರಲ್ಲಿ ಜರ್ನಲಿಸ್ಟಗಳನ್ನು ಸಹ ಟೀಸ್‌ ಮಾಡಲಾಗಿದೆ. ಈ ಸೀನ್‌ನ ನಂತರ ಸುದ್ದಿ ವರದಿಯ ದೃಶ್ಯಗಳಿಗೆ ತಗೋಳ್ತಾರೆ , “ಕ್ರೀಡಾ ಸಚಿವರು ಮ್ಯಾಚ್ ಫಿಕ್ಸಿಂಗ್ ವಿವಾದದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದ್ದಾರೆ” ಎಂದು ಹೇಳಲಾಗುತ್ತದೆ. ಈ ದೃ ಶ್ಯಗಳಲ್ಲಿ ಎಲ್ಲರ ಮುಖವಾಡಗಳು ಕಳಚಿ ಬೀಳುವುದರಿಂದ ಹಗರಣವು ದೊಡ್ಡದಾಗಿದೆ ಎನ್ನುವುದನ್ನ ಚಿತ್ರಿಸುತ್ತದೆ.

ಈ ಚಿತ್ರವನ್ನ ಸುಪ್ರಿಯಾ ಸೋಬ್ತಿ ಗುಪ್ತಾ ನಿರ್ದೇಶಿಸಿದ್ದಾರೆ ಮತ್ತು ಮೇಘಾ ಮಾಥುರ್ ನಿರ್ಮಿಸಿದ್ದಾರೆ . ಈ ಡಾಕ್ಯುಮೆಂಟರಿ ಮೂವಿ ಮಾರ್ಚ್ 17 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್ ಆಗಲಿದೆ. ಅಧಿಕೃತ ಸಾರಾಂಶದ ಪ್ರಕಾರ, ಕಾಟ್ ಔಟ್ ಭಾರತದಲ್ಲಿ ಕ್ರಿಕೆಟ್‌ನ ಪಥವನ್ನು ನೋಡುವ ಸ್ಪಂದನಾತ್ಮಕ ಕಥೆಯಾಗಿದೆ, ಇದು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು ಕ್ರಿಕೆಟ್ ಭ್ರಾತೃತ್ವವು ಅತಿದೊಡ್ಡ ಭ್ರಷ್ಟಾಚಾರ ಹಗರಣಗಳಲ್ಲಿ ಒಂದರಿಂದ ಹೇಗೆ ಹೋರಾಡಿತು ಎಂಬುದನ್ನು ಅನ್ವೇಷಿಸುವ ತಿರುವನ್ನ ಪಡೆದಿದೆ.

-masthmagaa.com

Contact Us for Advertisement

Leave a Reply