ಅಮೆರಿಕ ಹೊರಹೋಗ್ತಿದ್ದಂತೆ ಎಟಿಎಂ, ಬ್ಯಾಂಕ್ ಮುಂದೆ ಜನ ಕ್ಯೂ!

masthmagaa.com:

ಅಮೆರಿಕ ಸೇನೆ ಕಂಪ್ಲೀಟಾಗಿ ಅಫ್ಘಾನಿಸ್ತಾನದಿಂದ ಹೋದ ಬೆನ್ನಲ್ಲೇ ಕಾಬೂಲ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಒಂದು ರೀತಿಯ ಅನಿಶ್ಚಿತತೆ ಎದುರಾಗಿದೆ. ಹಣಕಾಸಿನ ಪರಿಸ್ಥಿತಿ ಏನಾಗುತ್ತೋ..? ಮುಂದೇನಾಗುತ್ತೋ ಏನೋ ಅಂತ ಹೆದರಿದ ಜನ ಇರೋ ಬರೋ ದುಡ್ಡೆಲ್ಲವನ್ನು ವಿತ್ ಡ್ರಾ ಮಾಡಿಕೊಳ್ಳಲು ಬ್ಯಾಂಕ್ ಮತ್ತು ಎಟಿಎಂಗಳ ಮುಂದು ಕ್ಯೂ ನಿಲ್ತಿದ್ದಾರೆ. ಅದ್ರೆ ಈಗಾಗಲೇ ಬ್ಯಾಂಕ್​ಗಳು ಕಾರ್ಯ ನಿರ್ವಹಿಸುವಂತೆ ಕರೆ ನೀಡಿರೋ ತಾಲಿಬಾನಿಗಳು, ವಾರಕ್ಕೆ 20 ಸಾವಿರ ಅಫ್ಘನಿಗಿಂತ ಹೆಚ್ಚು ದುಡ್ಡು ವಿತ್​ ಡ್ರಾ ಮಾಡಂಗಿಲ್ಲ ಅಂತ ಕೂಡ ಆದೇಶಿಸಿದ್ದಾರೆ.

-masthmagaa.com

Contact Us for Advertisement

Leave a Reply