ಟೀಕೆಗಳು ಸಾಯುತ್ತವೆ, ಕೆಲಸಗಳು ಮಾತ್ರ ಉಳಿಯುತ್ತವೆ: ಡಿಕೆ ಶಿವಕುಮಾರ್‌

masthmagaa.com:

ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿಯೋಜನೆ ಜಾರಿ ಬೆನ್ನಲ್ಲೇ ವಿಪಕ್ಷಗಳ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ 5 ಗ್ಯಾರಂಟಿ ಕೊಟ್ಟಿದ್ವಿ. ಇಂದು ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಮಾತ್ರ ಉಳಿಯುತ್ತವೆ ಅಂತ ಹೇಳಿದ್ದಾರೆ. ಇದೇ ವೇಳೆ ಬಿಜೆಪಿ, ಜೆಡಿಎಸ್​​​ ಸ್ನೇಹಿತರು ಟೀಕೆಗಳ ಸುರಿಮಳೆ ಸುರಿಸ್ತಿದ್ದಾರೆ. ವಿಪಕ್ಷಗಳಿಗೆ ಉತ್ತರ ನೀಡುವ ಸಾಮರ್ಥ್ಯ ನಮ್ಮ ಬಳಿ ಇಲ್ಲ. ಮಂಗಳೂರಿನಲ್ಲಿ ಶಕ್ತಿ ಯೋಜನೆಯನ್ನು ಘೋಷಣೆ ಮಾಡಿದ್ದೆವು. ಬಹಳ ಚರ್ಚೆ ಮಾಡಿಯೇ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ನಮ್ಮ ರಾಜ್ಯ ದಿವಾಳಿ ಆಗುತ್ತೆ ಅಂತಾ ಬಿಜೆಪಿಯವರು ಹೇಳುತ್ತಿದ್ದಾರೆ.. ಆದರೆ ಆದಕ್ಕೆ ಆಸ್ಪದ ನೀಡುವುದಿಲ್ಲ.. ಪ್ರತಿಯೊಂದಕ್ಕೂ ಲೆಕ್ಕ ಇಡುತ್ತೇವೆ. KSRTC ಮತ್ತು BMTC ಸಂಸ್ಥೆಗಳು ನಮ್ಮ ಹೆಮ್ಮೆಯ ಸಂಸ್ಥೆಗಳು.. ಅವುಗಳಿಗೆ ನಷ್ಟವಾಗಲು ಬಿಡೋದಿಲ್ಲ. ಪ್ರತಿಯೊಂದಕ್ಕೂ ಲೆಕ್ಕ ಇಟ್ಟು ಸರ್ಕಾರದ ವತಿಯಿಂದ ಆ ಹಣವನ್ನು ನೀಡುತ್ತೇವೆ ಅಂತ ಡಿಸಿಎಂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply