ಸೌದಿಯಲ್ಲಿ ತಬ್ಲೀಘಿ ಜಮಾತ್‌ ನಿರ್ಬಂಧ : ಪಾಕಿಸ್ತಾನದಲ್ಲಿ ಭುಗಿಲೆದ್ದ ಆಕ್ರೋಶ

masthmagaa.com:

ತಬ್ಲೀಘಿ ಜಮಾತ್​​​​ ನಿರ್ಬಂಧಿಸಿದ ಸೌದಿ ಅರೇಬಿಯಾ ವಿರುದ್ಧ ಪಾಕಿಸ್ತಾನದಲ್ಲಿ ಆಕ್ರೋಶ ಭುಗಿಲೆದ್ದಿದೆ. ಅದ್ರಲ್ಲೂ ಪಂಜಾಬ್ ಪ್ರಾಂತ್ಯದಲ್ಲಿ ನಿರ್ಣಯ ಮಂಡಿಸಲಾಗಿದ್ದು, ಅವಿರೋಧವಾಗಿ ಪಾಸ್ ಮಾಡಲಾಗಿದೆ. ಜೊತೆಗೆ ಎಲ್ಲಾ ಶಾಸಕರು ತಬ್ಲೀಘಿ ಜಮಾತ್​​​ಗೂ ಭಯೋತ್ಪಾದನೆಗೂ ಸಂಬಂಧವಿಲ್ಲ. ಅದ್ರ ಇತಿಹಾಸದಿಂದಲೇ ಅದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ ಅನ್ನೋದು ಗೊತ್ತಾಗುತ್ತೆ ಅಂತ ನಿರ್ಣಯದಲ್ಲಿ ಹೇಳಲಾಗಿದೆ. ಆದ್ರೆ ಇತ್ತೀಚೆಗೆ ತಬ್ಲೀಘಿ ಜಮಾತ್ ಮೇಲೆ ನಿರ್ಬಂಧ ವಿಧಿಸಿದ್ದ ಸೌದಿ ಅರೇಬಿಯಾ, ಈ ಸಂಘಟನೆ ಭಯೋತ್ಪಾದನೆಯ ಎಂಟ್ರಿ ಪಾಯಿಂಟ್​ ಅಂತ ಹೇಳಿತ್ತು. ಜೊತೆಗೆ ಇಸ್ಲಾಂ ವ್ಯವಹಾರಗಳ ಸಚಿವಾಲಯ ಸ್ಟೇಟ್ಮೆಂಟ್ ಬಿಡುಗಡೆ ಮಾಡಿ, ಎಲ್ಲಾ ಮಸೀದಿಗಳು ಜನ ಈ ಸಂಘಟನೆಗೆ ಸೇರದಂತೆ ಎಚ್ಚರಿಸಬೇಕು. ಜೊತೆಗೆ ಮಸೀದಿಗಳಲ್ಲಿ ಸಭೆ ನಡೆಸಿ, ಈ ಬಗ್ಗೆ ಮುನ್ನೆಚ್ಚರಿಕೆ ಮೂಡಿಸಬೇಕು ಅಂತ ಹೇಳಿತ್ತು. ಅಂದಹಾಗೆ​​​ 100 ವರ್ಷಗಳ ಹಿಂದೆ ಇಸ್ಲಾಮಿಕ್ ಧರ್ಮಗುರು ಮೌಲಾನಾ ಮೊಹ್ಮದ್ ಇಲ್ಯಾಸ್ ಕಂದಲ್ವಿ ತಬ್ಲೀಘಿ ಜಮಾತ್​​ನ್ನು ಧಾರ್ಮಿಕ ಸುಧಾರಣೆ ಚಳವಳಿಯ ರೀತಿಯಲ್ಲಿ​​​​​ ಶುರು ಮಾಡಿದ್ರು. ಇಸ್ಲಾಂ ಧರ್ಮದ ಆಧಾರ ಸ್ತಂಭಗಳಾದ ಪ್ರಚಾರ, ಪ್ರಾರ್ಥನೆ, ದಾನ, ಉಪವಾಸ ಮತ್ತು ಹಜ್​​ ತತ್ವಗಳನ್ನು ಪ್ರಚಾರ ಮಾಡೋದು ಇದ್ರ ಉದ್ದೇಶವಾಗಿತ್ತು. ಆದ್ರೀಗ ಅದು ಭಯೋತ್ಪಾದನೆಯ ಎಂಟ್ರಿ ಪಾಯಿಂಟ್ ಆಗಿದೆ ಅನ್ನೋದು ಸೌದಿಯ ವಾದ.. ಆದ್ರೆ ಇದಕ್ಕೆ ಇಮ್ರಾನ್ ಸರ್ಕಾರ ವಿರೋಧಿಸ್ತಿದೆ.. ಇದ್ರಿಂದ ಪಾಕಿಸ್ತಾನ ಸೌದಿಯನ್ನೇ ಎದುರು ಹಾಕಿಕೊಳ್ತಿದ್ಯಾ ಅನ್ನೋ ಪ್ರಶ್ನೆ ಮೂಡುತ್ತೆ. ಕೆಲವರು ಹೇಳೋ ಪ್ರಕಾರ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರೋ ಪಾಕ್ ಸೌದಿ ವಿರೋಧ ಕಟ್ಟಿಕೊಳ್ಳೋಕೆ ಸಾಧ್ಯವೇ ಇಲ್ಲ. ಇನ್ನು ಕೆಲವರ ಪ್ರಕಾರ ದೇಶದಲ್ಲಿನ ವಿವಿಧ ಸಮಸ್ಯೆಗಳು ಇಮ್ರಾನ್ ಖಾನ್ ಸರ್ಕಾರಕ್ಕೆ ಕೆಟ್ಟ ಹೆಸರು ತರ್ತಿವೆ. ಹೀಗಾಗಿ ತಬ್ಲೀಘಿ ಜಮಾತ್​​ಗೆ ಬೆಂಬಲಿಸಿ, ಅವರ ಬೆಂಬಲ ಪಡೆಯೋದು ಖಾನ್ ಪ್ಲಾನ್ ಆಗಿದೆ.

-masthmagaa.com

Contact Us for Advertisement

Leave a Reply