ಕಾಮನ್‌ವೆಲ್ತ್‌ ಗೇಮ್ಸ್‌2022: ಹೆವಿವೇಟ್‌ ವಿಭಾಗದ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ದಾಖಲೆ ಬರೆದ ಭಾರತ!

masthmagaa.com:

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಸಿಕ್ಕಿದೆ. ಹೆವಿವೇಟ್‌ ವಿಭಾಗದ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ್ ಎಂಬ ಅಥ್ಲೀಟ್‌ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಮೊದಲ ಪ್ರಯತ್ನದಲ್ಲಿ 208 ಕೆಜಿ ಹಾಗೂ ಎರಡನೇ ಪ್ರಯತ್ನದಲ್ಲಿ 212 ಕೆಜಿ ಭಾರ ಎತ್ತಿ ಒಟ್ಟು 134.5 ಅಂಕಗಳನ್ನ ಗಳಿಸಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್‌ ಕ್ರೀಡಾಕೂಟದ ಇತಿಹಾಸದಲ್ಲೇ ಅತ್ಯಧಿಕ ಅಂಕಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಭಾರತ 6 ಚಿನ್ನ, 7 ಬೆಳ್ಳಿ ಹಾಗೂ 7 ಕಂಚಿನೊಂದಿಗೆ 20 ಪದಕಗಳನ್ನ ತನ್ನದಾಗಿಸಿಕೊಂಡು ಏಳನೇ ಸ್ಥಾನದಲ್ಲಿದೆ.

 

-masthmagaa.com

Contact Us for Advertisement

Leave a Reply