CD ಲೇಡಿ ಜೊತೆ ಫೋನ್​ನಲ್ಲಿ ಮಾತಾಡಿದ್ರಾ ಮಾಜಿ ಸಚಿವ ಡಿ. ಸುಧಾಕರ್?

masthmagaa.com:

ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋದಲ್ಲಿ ಕಾಣಿಸಿಕೊಂಡಿರೋ ಯುವತಿಯ ವಿಚಾರಣೆ ವೇಳೆ ಆಕೆಯ ಕಾಲ್​ ರೆಕಾರ್ಡ್ಸ್​ನಲ್ಲಿ ಮಾಜಿ ಸಚಿವ ಡಿ. ಸುಧಾಕರ್​ ಹೆಸರು ಪತ್ತೆಯಾಗಿದೆ ಅಂತ ಹೇಳಲಾಗ್ತಿದೆ. ಈ ಬಗ್ಗೆ ಸ್ವತಃ ಡಿ. ಸುಧಾಕರ್ ಮಾತನಾಡಿ, ನನಗೆ ಪ್ರತಿದಿನ ಸಾವಿರಾರು ದೂರವಾಣಿ ಕರೆ ಬರುತ್ತೆ. ಅದ್ರಲ್ಲಿ ಯಾರ್​ ಜೊತೆ ಮಾತಾಡಿರ್ತೀನಿ, ಯಾರ್ ಜೊತೆ ಮಾತಾಡಿರಲ್ಲ ಅಂತ ಗೊತ್ತಿರಲ್ಲ. ಆಕೆ ಜೊತೆ ಮಾತಾಡಿರಬಹುದು ಅಥವಾ ಮಾತಾಡದೇ ಇರಬಹುದು. ಆದ್ರೆ ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನ್​ ಯಾರಿಗೂ ದುಡ್ಡು ಕೊಟ್ಟಿಲ್ಲ. ನನ್ನನ್ನ ಯಾರೂ ಹನಿಟ್ರ್ಯಾಪ್ ಮಾಡಿಲ್ಲ. ಎಸ್​ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದ್ರೆ ಹಾಜರಾಗ್ತೀನಿ ಅಂತ ಹೇಳಿದ್ದಾರೆ. ಅಂದ್ಹಾಗೆ ರಮೇಶ್ ಜಾರಕಿಹೊಳಿ ವಿಡಿಯೋ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೈವಾಡ ಇದೆ ಅಂತ ಯುವತಿಯ ಪೋಷಕರು ಆರೋಪ ಮಾಡ್ತಿದ್ದಾರೆ. ಮಾಜಿ ಸಚಿವ ಡಿ. ಸುಧಾಕರ್ ಕೂಡ ಡಿಕೆಶಿ ಆಪ್ತ ಎನ್ನಲಾಗ್ತಿದೆ. ಈ ಬಗ್ಗೆ ಕೇಳಿದ್ರೆ, ನನಗೆ ಡಿ.ಕೆ. ಶಿವಕುಮಾರ್ ಕೂಡ ಆಪ್ತರು. ಸಿದ್ದರಾಮಯ್ಯ ಕೂಡ ಆಪ್ತರು ಅಂತ ಡಿ. ಸುಧಾಕರ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply