ಅಪ್ಪು, ಅಣ್ಣಾವ್ರ ದಾರಿಯಲ್ಲಿ ನಡೆಯದ ದೊಡ್ಮನೆ ಹಿರಿಮಗ!

masthmagaa.com:

ಸಿನಿಮಾ ಇಂಡಸ್ಟ್ರಿಯ ನಟ ನಟಿಯರೆಲ್ಲಾ ತಮ್ಮ ನೆಚ್ಚಿನ ರಾಜಕೀಯ ಪಕ್ಷವನ್ನ ಬೆಂಬಲಿಸೋದ್ರಲ್ಲಿ ಬ್ಯುಸಿ ಇದಾರೆ. ಶಿವಣ್ಣ ಚಿತ್ರರಂಗದವರೆಲ್ಲರ ಜೊತೆ ಒಳ್ಳೇ ಫ್ರೆಂಡ್‌ಶಿಪ್‌ ಇಟ್ಕೊಂಡಿದ್ದಾರೆ. ಶಿವಣ್ಣ ಮತ್ತು ಸುದೀಪ್‌ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಸುದೀಪ್‌ ಶಿವಣ್ಣ ಮತ್ತು ಗೀತಾ ಅವರ ಮಧ್ಯೆ ಕೂಡ ಒಳ್ಳೆಯ ರಿಲೇಷನ್‌ಶಿಪ್‌ ಬಾಂಡ್‌ ಇದೆ. ಆದರೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸುದೀಪ್‌ ಒಂದು ಪಕ್ಷಕ್ಕೆ ಸಪೋರ್ಟ್‌ ಮಾಡಿದ್ರೆ, ಶಿವಣ್ಣ ಮತ್ತು ಗೀತಾ ಇನ್ನೊಂದು ಪಕ್ಷಕ್ಕೆ ಸಪೋರ್ಟ್‌ ಮಾಡ್ತಾ ಇದಾರೆ. ಈ ಇಬ್ಬರು ಫ್ರೆಂಡ್ಸ್‌ ಹೌದು, ಆದರೆ ಈಗ ಬೇರೆ ಬೇರೆ ಪಕ್ಷಕ್ಕೆ ಪ್ರಚಾರ ಮಾಡೋ ಮುಖಾಂತರ ಸುದ್ದಿಯಲ್ಲಿದ್ದಾರೆ. ರಾಜಕೀಯದಲ್ಲಿ ಫ್ರೆಂಡ್‌ಶಿಪ್‌ ಏಲ್ಲಾ ಏನು ನಡ್ಯೋದಿಲ್ಲ ಅನ್ನೋದಕ್ಕೆ ಇವರೇ ಎಕ್ಸಾಂಪಲ್‌ ಅಂತ ಹೇಳಬಹುದು. ಸುದೀಪ್‌ ಬಿಜೆಪಿ ಪಕ್ಷದ ಪರ ಪ್ರಚಾರದಲ್ಲಿ ಬ್ಯುಸಿ ಆದ್ರೆ, ಶಿವಣ್ಣ ಮತ್ತು ಪತ್ನಿ ಗೀತಾ ಕಾಂಗ್ರೆಸ್‌ ಪರ ಪ್ರಚಾರದಲ್ಲಿ ಬ್ಯುಸಿ ಇದಾರೆ.

ಇನ್ನು ಶಿವಣ್ಣ ಅವರ ತಂದೆ ಡಾ.ರಾಜ್‌ಕುಮಾರ್‌ ಅವರಿಗೆ ರಾಜಕೀಯ ಪಕ್ಷ ಸೇರುವಂತೆ ಹಲವಾರು ಆಫರ್‌ಗಳು ಬಂದಿತ್ತು. ಆದರೂ ಕೂಡ ರಾಜ್‌ಕುಮಾರ್‌ ಅವರು ರಾಜಕೀಯದ ಸುದ್ದಿಗೆ ಹೋಗದೇ ಕೇವಲ ಸಿನಿಮಾ, ನನ್ನ ಅಭಿಮಾನಿಗಳು ಅಂತ ಜೀವನ ಮಾಡಿದ್ರು, ಅದರಂತೆ ಅವರ ಕೊನೆ ಮಗ ಪುನೀತ್‌ ರಾಜ್‌ಕುಮಾರ್‌ ಕೂಡ ರಾಜಕೀಯ ಆಫರ್‌ಗಳು ಬಂದ್ರೂ ಸಹ ಯಾವುದನ್ನೂ ಲೆಕ್ಕಿಸದೇ ಅಪ್ಪ ಹಾಕಿಕೊಟ್ಟ ಮಾರ್ಗದಲ್ಲೇ ಮುಂದುವರೆದಿದ್ರು. ಈಗ ಶಿವಣ್ಣ ಮತ್ತು ಅವರ ಪತ್ನಿ ಗೀತಾ ಕಾಂಗ್ರೆಸ್‌ ಪಕ್ಷದ ಪರವಾಗಿ ನಿಂತಿದ್ದಾರೆ, ಮತ್ತು ಪ್ರಚಾರದಲ್ಲಿ ಭಾಗಿ ಆಗ್ತಾ ಇದಾರೆ. ಇದಷ್ಟೇ ಅಲ್ಲದೇ ಶಿವಣ್ಣ “ನಾನು ಕೂಡ ರಾಹುಲ್‌ ಗಾಂಧಿ ಅವರ ಅಭಿಮಾನಿಯಾಗಿ ಈ ಕಾರ್ಯಕ್ರಮಕ್ಕೆ ಬಂದಿದೀನಿ” ಅಂತ ಪ್ರಚಾರದ ಸಮಯದಲ್ಲಿ ಹೇಳಿದ್ರು. ಶಿವಣ್ಣ ಅವರ ಈ ಹೇಳಿಕೆ ಎಲ್ಲಾ ಕಡೆ ಸುದ್ದಿ ಮಾಡಿತ್ತು. ಶಿವಣ್ಣ ಅವರ ಅಭಿಮಾನಿಗಳು “ಇಷ್ಟು ದಿನ ನಿಮ್ಮ ಮೇಲೆ ಇದ್ದ ಗೌರವ, ನೀವು ಹೇಳಿದ ಒಂದು ಮಾತಿಂದ ಕಡಿಮೆ ಆಗಿದೆ” ಅಂತ ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ರು. “ಜಗದೀಶ್‌ ಶೆಟ್ಟರ್‌ ಜೊತೆ ಫ್ರೆಂಡ್‌ಶಿಪ್‌ಕ್ಕಿಂತ ಜಾಸ್ತಿ ಒಳ್ಳೆ ಬಾಂಧವ್ಯ ಇದೆ, ಭೀಮಣ್ಣ ನಾಯ್ಕ್‌ ನನಗೆ ದೂರದ ಸಂಬಂಧಿ ಹಾಗಾಗಿ ನಾನು ಕಾಂಗ್ರೆಸ್‌ಗೆ ಸಪೋರ್ಟ್‌ ಮಾಡ್ತಾ ಇದೀನಿ” ಅಂತ ಕೂಡ ಶಿವಣ್ಣ ಹೇಳಿದ್ರು.

ಇನ್ನೊಂದು ಕಡೆ ಕಿಚ್ಚ ಸುದೀಪ್‌ ಕೂಡ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. “ಬಸವರಾಜ್‌ ಬೊಮ್ಮಾಯಿ ನನಗೆ ಮಾಮ ಆಗಬೇಕು. ಮಾಮ ಎಲ್ಲೆಲ್ಲಿ ಪ್ರಚಾರ ಮಾಡು ಅಂತ ಹೇಳ್ತಾರೋ ಅಲ್ಲೆಲ್ಲಾ ಪ್ರಚಾರ ಮಾಡ್ತೀನಿ” ಅಂತ ಬಿಜೆಪಿ ಪರವಾಗಿ ಅಖಾಡಕ್ಕೆ ಇಳಿದಿದ್ರು. ಅಷ್ಟೇ ಅಲ್ದೇ ಸುದೀಪ್‌ ಉಪ ಮುಖ್ಯಮಂತ್ರಿ ಆಗಬೇಕು ಅಂತ ಕೂಡ ಸುದ್ದಿಯಾಗಿತ್ತು. ಆದರೆ ಸುದೀಪ್‌ ಮಾತ್ರ “ಮಾಮ ಪ್ರಚಾರ ಮಾಡೋಕೆ ಹೇಳಿದ್ದಾರೆ, ನಾನು ಮಾಡ್ತಾ ಇದೀನಿ. ಟೈಮ್‌ ಹೇಗೆ ಬೇಕಿದ್ರೂ ಚೇಂಜ್‌ ಆಗಬಹುದು. ಮುಂದೆ ಏನ್‌ ಆಗತ್ತೋ ನೋಡೋಣ” ಅಂತ ಕೂಡ ಹೇಳಿದ್ರು. ಹಾಗೇ ಕರ್ನಾಟಕದ ಹಲವೆಡೆ ಬಿಜೆಪಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಇನ್ನು ಗೀತಾ ಅವರು ಕಾಂಗ್ರೆಸ್‌ ಗೆ ಸೇರ್ಪಡೆ ಆಗಿದ್ದಕ್ಕೆ ಸುದೀಪ್‌ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. “ಗೀತಕ್ಕ ಅಂದ್ರೆ ನನಗೆ ತುಂಬಾ ಇಷ್ಟ, ಅವರ ನನ್ನ ಫೇವರೇಟ್‌ ಪರ್ಸನ್‌. ನನಗೆ ನಿಜವಾಗ್ಲೂ ಅಕ್ಕ ಅವರು. ನನಗೆ ಬಹಳ ಬೇಕಾದಂತ ವ್ಯಕ್ತಿ ಅವರು, ನಾನು ಅವರಿಗೆ ಒಳ್ಳೇದಾಗ್ಲಿ ಅಂತ ವಿಶ್‌ ಮಾಡ್ತೀನಿ. ನನಗೆ ಗೊತ್ತಿರೋ ಹಾಗೆ ಅವರು ಬಹಳ ಒಳ್ಳೆಯ ಮನುಷ್ಯರು. ಲೈಫ್‌ ಅಲ್ಲಿ ಏನೇ ಡಿಸಿಷನ್‌ ತಗೊಂಡ್ರು ಕೂಡ ಅವರು ತುಂಬಾ ಯೋಚನೆ ಮಾಡಿರ್ತಾರೆ. ಅವರಿಗೆ ಒಳ್ಳೇದಾಗ್ಬೇಕು.” ಅಂತ ವಿಶ್‌ ಮಾಡಿದ್ರು.

ಇನ್ನು ಶಿವಣ್ಣ ಕೂಡ ಸುದೀಪ್‌ ಬಗ್ಗೆ ಮಾತನಾಡಿದ್ದಾರೆ. “ಎಲ್ಲರಿಗೂ ಕೂಡ ಅವರದ್ದೇ ಆದ ಒಂದಿಷ್ಟು ಐಡಿಯಾಲಜಿ ಇರತ್ತೆ. ನಾನು ಯಾರ ಬಗ್ಗೆಯೂ ನೆಗೆಟೀವ್‌ ಆಗಿ ಮಾತಾಡೋದಿಲ್ಲ. ಬೇರೆವರು ಹಾಗ್‌ ಮಾಡಿದ್ರು, ಹೀಗ್‌ ಮಾಡಿದ್ರು ಅನ್ನೋದು ನನಗೆ ಬೇಕಿಲ್ಲ. ಅವರಿಗೆ ಬೇಕಾದವರಿಗೆ ಅವರು ಸಪೋರ್ಟ್‌ ಮಾಡ್ಲಿ” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply