ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ದಾನಿಶ್ ಸೇಠ್ !!

masthmagaa.com:

ಸ್ಟಾಂಡ್ ಅಪ್ ಕಾಮಿಡಿಯನ್ ಮತ್ತು ನಟ ದಾನಿಶ್​ ಸೇಠ್​ ಅವರು ಗ್ರಾಫಿಕ್ ಡಿಸೈನರ್ ಅನ್ಯಾ ರಂಗಸ್ವಾಮಿ ಜತೆ ಸಿಂಪಲ್​ ಆಗಿ ಮದುವೆ ಆಗಿದ್ದಾರೆ. ಜೂನ್​ 9ರಂದು ಮದುವೆ ನೋಂದಣಿ ಮಾಡಿಸಿಕೊಂಡು, ಜೂನ್​ 10ರಂದು ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ದಾನಿಶ್ ಸ್ವತಃ ತಾವೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ‘ನಾನು ಮತ್ತು ಅನ್ಯಾ, ನಮ್ಮ ಕುಟುಂಬದವರು ಹಾಗೂ ಆಪ್ತರು ಎನಿಸಿಕೊಂಡ 15 ಜನರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡೆವು. ಜೂನ್​ 9ರಂದು ನಾವು ಮದುವೆ ನೋಂದಣಿ ಮಾಡಿಕೊಂಡಿದ್ದೆವು. ನಮ್ಮನ್ನು ನೀವು ಆಶೀರ್ವದಿಸಿ’ ಅಂತ ದಾನಿಶ್​ ಬರೆದುಕೊಂಡಿದ್ದಾರೆ. ಜತೆಗೆ,ಫೋಟೋಗಳನ್ನ ಕೂಡ ಅವರು ಹಂಚಿಕೊಂಡಿದ್ದಾರೆ.

ಆರ್​ಸಿಬಿ ಇನ್​ಸೈಡರ್​ ಕೂಡ ಆಗಿರುವ ದಾನಿಶ್, ಕನ್ನಡದ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅನ್ಯಾ ಅವರು ವೃತ್ತಿಯಲ್ಲಿ ಗ್ರಾಫಿಕ್​ ಡಿಸೈನರ್ ಆಗಿದ್ದು, ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.

-masthmagaa.com

Contact Us for Advertisement

Leave a Reply