ರಾಮನಗರ ಜಿಲ್ಲೆ ವಿಚಾರ: ಮುಂದುವರೆದ ಡಿಕೆಶಿ ಮತ್ತು ಎಚ್‌ಡಿಕೆ ವಾಕ್ಸಮರ

masthmagaa.com:

ರಾಮನಗರ ಜಿಲ್ಲೆಯನ್ನು ದಕ್ಷಿಣ ಬೆಂಗಳೂರು ಅಂತ ಮರುನಾಮಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್‌ ಮತ್ತು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ನಡುವಿನ ವಾಗ್ವಾದ ಕಂಟಿನ್ಯೂ ಆಗಿದೆ. ಇದೀಗ ರಾಮನಗರ ಜಿಲ್ಲೆ ವಿಚಾರವಾಗಿ ಬಹಿರಂಗ ಚರ್ಚೆಗೆ ಡಿಕೆ ಶಿವಕುಮಾರ್ ಅವರು ಕುಮಾರಸ್ವಾಮಿಯವರಿಗೆ ಸವಾಲು ಹಾಕಿದ್ದಾರೆ. ಇದಕ್ಕೆ ರಿಯಾಕ್ಟ್‌ ಮಾಡಿರೋ ಕುಮಾರಸ್ವಾಮಿ, ರಾಮನಗರ ಜಿಲ್ಲೆಯ ಬಗ್ಗೆ ಡಿಕೆ ಶಿವಕುಮಾರ್​ ಹಾಕಿರುವ ಸವಾಲು ಸ್ವೀಕರಿಸುತ್ತೇನೆ. ನನ್ನ ಆರೋಗ್ಯ ಲೆಕ್ಕಿಸದೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ರಾಮನಗರ ಜೊತೆ ವ್ಯವಹಾರಿಕ ಸಂಬಂಧವಿಲ್ಲ, ಭಾವನಾತ್ಮಕ ಸಂಬಂಧವಿದೆ. ನಾನು ಹಾಸನದಲ್ಲಿ ಹುಟ್ಟಿದ್ದು, ನನ್ನ ಅಂತ್ಯ ರಾಮನಗರದಲ್ಲಿ. ಹೀಗಾಗಿ ನನ್ನ ಕೊನೆಯ ಉಸಿರು ಇರುವ ತನಕ ರಾಮನಗರಕ್ಕಾಗಿ ಹೋರಾಟ ಮಾಡುತ್ತೇನೆ ಅಂತ ಪ್ರತಿಜ್ಞೆ ಮಾಡಿದ್ದಾರೆ.

ಇತ್ತ ಇದಕ್ಕೆ ಪ್ರತಿಕ್ರಿಯಿಸಿರುವ ಶಿವಕುಮಾರ್‌, ಅಸೆಂಬ್ಲಿಯಲ್ಲಿ ಎಲ್ಲಾ ಮಾಧ್ಯಮಗಳಿಗೂ ಅವಕಾಶ ಸಿಗಲಿದೆ. ಕುಮಾರಸ್ವಾಮಿಯವರು ಎಲ್ಲಾ ದಾಖಲೆಗಳನ್ನ ಅಸೆಂಬ್ಲಿಗೆ ತೆಗೆದುಕೊಂಡು ಬರ್ಲಿ, ನಾನು ಉತ್ತರ ಕೊಡ್ತೀನಿ. ಅವರು ಸವಾಲು ಸ್ವೀಕಾರ ಮಾಡಿರೋದಕ್ಕೆ ಬಹಳ ಸಂತೋಷವಾಗಿದೆ. ಹಿಂದೆ ಕೂಡ ಚರ್ಚೆ ನಿಗದಿ ಮಾಡಿದ್ರು, ಆಗ ಅಲ್ಲೇ ಉತ್ತರ ಕೊಟ್ಟಿದ್ದೆ. ಬಳಿಕ ಅವರು ಬಂದು ಕ್ಷಮೆ ಕೇಳಿದ್ದು ನಿಮಗೆ ಗೊತ್ತಿದೆ ಅಂತ ಡಿಕೆಶಿ ಟಾಂಗ್‌ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply