ಚೀನಾದಲ್ಲಿ ಹಂದಿಗಳ ಮಾರಣಹೋಮ.. ಕಾರಣ ಏನು ಗೊತ್ತಾ?

masthmagaa.com:

ಉತ್ತರ ಚೀನಾದ ನದಿಯೊಂದರ ದಡದಲ್ಲಿ ಡಜನ್​ಗಟ್ಲೆ ಸತ್ತ ಹಂದಿಗಳು ಪತ್ತೆಯಾಗಿವೆ. ಅವುಗಳ ಸಾವಿಗೆ ಕಾರಣ ಏನು ಅನ್ನೋದರ ಕುರಿತು ತನಿಖೆ ನಡೆಯುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲೂ ಫುಲ್ ಚರ್ಚೆಯಾಗ್ತಿದೆ. ಚೀನಾದಲ್ಲಿ ಇದೇನು ಹೊಸತಲ್ಲ.. ಇಂಥಹ ಘಟನೆಗಳು ನಡೆಯುತ್ತಲೇ ಇರುತ್ತವೆ. 2013ರಲ್ಲಿ ಶಾಂಘೈನ ನದಿಯೊಂದರಲ್ಲಿ 16 ಸಾವಿರಕ್ಕೂ ಹೆಚ್ಚು ಹಂದಿಗಳ ಶವ ಪತ್ತೆಯಾಗಿತ್ತು.

ಚೀನಾದಲ್ಲಿ ಈ ಹಿಂದೆ ಬಂದಿದ್ದ ಆಫ್ರಿಕನ್ ಹಂದಿ ಜ್ವರ 10 ಕೋಟಿಗೂ‌ ಅಧಿಕ ಹಂದಿಗಳನ್ನು ಬಲಿಪಡೆದುಕೊಂಡಿತ್ತು. ಇದೀಗ ಯೆಲ್ಲೋ ನದಿ ದಡದಲ್ಲಿ ಸತ್ತ ಹಂದಿಗಳು ಪತ್ತೆಯಾಗಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಕಾಯಿಲೆ ಕಾಣಿಸಿಕೊಂಡ ಹಂದಿಗಳನ್ನು ಈ ರೀತಿ ನದಿಗೆ ಎಸೆಯಲಾಗಿದೆ ಅಂತ ಚರ್ಚೆ ನಡೀತಾ ಇದೆ. ಸದ್ಯ ಹಂದಿಗಳನ್ನು ಹೊರತೆಗೆದು, ಬೇರೆ ಕಡೆ ಹೂಳಲಾಗಿದೆ ಅಂತ ಸ್ಥಳೀಯ ಆಡಳಿತ ತಿಳಿಸಿದೆ.

-masthmagaa.com

Contact Us for Advertisement

Leave a Reply