ದಕ್ಷಿಣ ಆಫ್ರಿಕಾದಲ್ಲಿ ನಿಲ್ಲದ ಹಿಂಸಾಚಾರ.. ಅಂಗಡಿಗಳ ಲೂಟಿ.. 72 ಜನ ಬಲಿ

masthmagaa.com:

ದಕ್ಷಿಣ ಆಫ್ರಿಕಾದಲ್ಲಿ ನಡೀತಿರೋ ಹಿಂಸಾಚಾರ, ಅಂಗಡಿಗಳ ಸಾಮೂಹಿಕ ಲೂಟಿ ಐದನೇ ದಿನಕ್ಕೆ ಕಾಲಿಟ್ಟಿದೆ. ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ಧಾರೆ. ಪರಿಸ್ಥಿತಿಯನ್ನ ನಿಯಂತ್ರಿಸಲು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಸೇನೆಯನ್ನ ನಿಯೋಜಿಸಿದ್ರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರ್ತಿಲ್ಲ. ಮಹಿಳೆಯರು, ಮಕ್ಕಳು ಎನ್ನದೇ ಎಲ್ಲರೂ ಸಾಮೂಹಿಕವಾಗಿ ಅಂಗಡಿ ಮತ್ತು ಗೋಡೌನ್​ಗಳಿಗೆ ನುಗ್ಗಿ ಲೂಟಿ ಮಾಡ್ತಿದ್ದಾರೆ. ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದು ಶಾಪಿಂಗ್​ ಮಾಲ್​ಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಆರ್ಥಿಕ ರಾಜಧಾನಿ ಅಂತಾನೇ ಕರೆಸಿಕೊಳ್ಳೋ ಜೋಹಾನೆಸ್​ಬರ್ಗ್​​ ಮತ್ತು ಕ್ವಾಝುಲು-ನಟಲ್​ ಪ್ರಾಂತ್ಯದಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಹಿಂಸಾಚಾರ, ಲೂಟಿ ಮತ್ತು ಅರಾಜಕತೆಯ ಮಾರ್ಗ ಹಿಂಸಾಚಾರ ಮತ್ತಷ್ಟು ಹೆಚ್ಚಾಗೋಕೆ ದಾರಿ ಮಾಡಿ ಕೊಡುತ್ತೆ ಅಂತ ದಕ್ಷಿಣ ಆಫ್ರಿಕಾ ಅಧ್ಯಕ್ಷರು ಎಚ್ಚರಿಸಿದ್ಧಾರೆ. ಪ್ರಮುಖ ವಿರೋಧ ಪಕ್ಷ ಆಗಿರೋ ಡೆಮಾಕ್ರೆಟಿಕ್ ಅಲಾಯನ್ಸ್​​ ಪಕ್ಷವು ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ಜಾಕೋಬ್ ಝೂಮಾ ಅವರ ಮಕ್ಕಳ ಮೇಲೆ ಕ್ರಿಮಿನಲ್ ಕೇಸ್​ ಹಾಕೋದಾಗಿ ಹೇಳಿದೆ. ಭ್ರಷ್ಟಾಚಾರ ಕೇಸ್​​ನಲ್ಲಿ ಝೂಮಾ ಅವರನ್ನ ಜೈಲಿಗೆ ಹಾಕಿದ ಬೆನ್ನಲ್ಲೇ ಹಿಂಸಾಚಾರ ಹೆಚ್ಚಾಗಿರೋದು.

-masthmagaa.com

Contact Us for Advertisement

Leave a Reply