masthmagaa.com:

ದೇಶದಲ್ಲಿ ಕೊರೋನಾ ಲಸಿಕೆ ಚುಚ್ಚೋ ಕಾರ್ಯಕ್ರಮ ಶುರುವಾಗಿ ಇವತ್ತಿಗೆ 9ನೇ ದಿನ.. ಈ 9 ದಿನದಲ್ಲಿ ಲಸಿಕೆ ಚುಚ್ಚಿಕೊಂಡ 6 ಜನ ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಆದ್ರೆ ಈ ಆರೂ ಜನರ ಸಾವಿಗೂ ಕೊರೋನಾ ಲಸಿಕೆಗೂ ಯಾವುದೇ ಸಂಬಂಧ ಇಲ್ಲ ಅಂತಾನೂ ಆರೋಗ್ಯ ಇಲಾಖೆ ತಿಳಿಸಿದೆ. ಇದರಲ್ಲಿ ನಿನ್ನೆ ಹರಿಯಾಣದ ಗುರುಗ್ರಾಮದಲ್ಲಿ ಮೃತಪಟ್ಟ 56 ವರ್ಷದ ಮಹಿಳೆ ಕೂಡ ಸೇರಿದ್ದಾರೆ. ಆರೋಗ್ಯ ಕಾರ್ಯಕರ್ತರಾಗಿದ್ದ ಈ ಮಹಿಳೆಗೆ ಜನವರಿ 16ನೇ ತಾರೀಖು ಅಂದ್ರೆ, ಭಾರತದಲ್ಲಿ ಕೊರೋನಾ ಲಸಿಕೆ ಅಭಿಯಾನ ಶುರುವಾಯ್ತಲಾ ಆ ದಿನ ಲಸಿಕೆ ಚುಚ್ಚಲಾಗಿತ್ತು. ಲಸಿಕೆ ಹಾಕಿದ ಬಳಿಕ ಯಾವುದೇ ಅಡ್ಡಪರಿಣಾಮ ಕಾಣಿಸಿಕೊಂಡಿರಲಿಲ್ಲ. ಆದ್ರೆ ನಿನ್ನೆ ಮೃತಪಟ್ಟಿದ್ದಾರೆ. ಸೋ, ಆಕೆಯ ಸಾವಿಗೆ ಲಸಿಕೆಯೇ ಕಾರಣವಿರಬಹುದೆಂದು ನಂಗೆ ಅನಿಸುತ್ತಿದೆ ಅಂತ ಆಕೆಯ ಪತಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಮಹಿಳೆಯ ಸಾವಿಗೆ ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆ ಕಾರಣ ಅಂತ ಕೇಂದ್ರ ಆರೋಗ್ಯ ಕಾರ್ಯದರ್ಶಿ ಮನೋಹರ್ ಅಜ್ಞಾನಿ ತಿಳಿಸಿದ್ದಾರೆ. ಇನ್ನು ಇದುವರೆಗೆ ಲಸಿಕೆ ಹಾಕಿಸಿಕೊಂಡವರಲ್ಲಿ ಕೇವಲ 11 ಜನರನ್ನ ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಜಸ್ಟ್ 0.0007 ಪರ್ಸೆಂಟ್. ಬೇರೆ ದೇಶಗಳಿಗೆ ಹೋಲಿಸಿದ್ರೆ ತುಂಬಾ ಕಮ್ಮಿ ಅಂತ ಹೇಳ್ಬೋದು.

-masthmagaa.com

Contact Us for Advertisement

Leave a Reply