ಮಡಗಾಸ್ಕರ್​​ನಲ್ಲಿ ಭೀಕರ ಚಂಡಮಾರುತ.. ಕನಿಷ್ಠ 92 ಜನ ಸಾವು!

masthmagaa.com:

ಹಿಂದೂ ಮಹಾಸಾಗರದಿಂದ ಬೀಸುತ್ತಿರುವ “ಬಾಟ್ಸಿರಾಯ್‌” ಚಂಡ ಮಾರುತಕ್ಕೆ ಆಫ್ರಿಕಾದ ದ್ವೀಪ ರಾಷ್ಟ್ರ ಮಡಗಾಸ್ಕಾರ್‌ ಸ್ಥಿತಿ ಮತ್ತಷ್ಟು ನಲುಗಿದೆ. ಚಂಡಮಾರುತದ ಅಬ್ಬರಕ್ಕೆ ಸಾವಿನ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. 1 ಲಕ್ಷಕ್ಕೂ ಅಧಿಕ ಜನರು ನೆಲೆ ಕಳೆದುಕೊಂಡಿದ್ದು, ತುರ್ತು ಪರಿಹಾರ ಬೇಕಿದೆ ಅಂತ ಅಲ್ಲಿನ ಡಿಸಾಸ್ಟರ್‌ ಮ್ಯಾನೇಜ್‌ ಮೆಂಟ್‌ ಹೇಳಿದೆ. ದೇಶಾದ್ಯಂತ ವಿಪರೀತ ಮಳೆಯಾಗುತ್ತಿದ್ದು, ಘಂಟೆಗೆ 162 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವಿಶ್ವಸಂಸ್ಥೆಯ ಪುಡ್‌ ಪೋರ್ಗಾಮ್‌ ಅಗತ್ಯ ಆಹಾರ ಸಾಮಾಗ್ರಿ ಒದಗಿಸೋದಾಗಿ ಭರವಸೆ ಕೊಟ್ಟಿದೆ. ಈ ಬೆನ್ನೆಲ್ಲೇ ಜರ್ಮನಿ, ಫ್ರಾನ್ಸ್‌ ಸೇರಿದಂತೆ ಹಲವು ರಾಷ್ಟ್ರಗಳು ಸಹಾಯಕ್ಕೆ ಮುಂದಾಗಿವೆ. ಹಿಂದುಳಿದ ರಾಷ್ಟ್ರವಾದ ಮಡಗಾಸ್ಕರ್‌ ನಲ್ಲಿ ಶೇ 77 % ಜನ ಬಡತನ ರೇಖೆಗಿಂತ ಕೆಳಗಿದ್ದಾರೆ.

-masthmagaa.com

Contact Us for Advertisement

Leave a Reply