ನಾನು ಲಸಿಕೆ ಹಾಕಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ: ಜೇರ್ ಬೋಲ್ಸೊನಾರೋ

masthmagaa.com:

ಬ್ರೆಜಿಲ್ ಅಧ್ಯಕ್ಷ ಜೇರ್ ಬೋಲ್ಸೊನಾರೋ ನಾನು ಯಾವುದೇ ಕಾರಣಕ್ಕೂ ಕೊರೋನಾ ಲಸಿಕೆ ತೆಗೆದುಕೊಳ್ಳಲ್ಲ ಅಂತ ಹೇಳಿದ್ದಾರೆ. ಈ ಹಿಂದೆ ನಾನು ಲಸಿಕೆ ತಗೊಂಡ್ರೂ ಕೊನೆಯ ಬ್ರೆಜಿಲಿಗನಾಗಿ ತಗೊಳ್ತೀನಿ ಅಂತ ಹೇಳಿದ್ರು. ಆದ್ರೀಗ ಪ್ರತಿಕ್ರಿಯಿಸಿರೋ ಜೇರ್ ಬೋಲ್ಸೊನಾರೋ, ನಾನು ಲಸಿಕೆ ಹಾಕಿಸಿಕೊಳ್ಳದಿರಲು ನಿರ್ಧರಿಸಿದ್ದೀನಿ. ನನ್ನಲ್ಲಿ ಈಗಾಗಲೇ ಕೊರೋನಾದ ಪ್ರತಿಕಾಯಗಳಿವೆ.. ಹೀಗಿರುವಾಗ ನಾನ್ಯಾಕೆ ಲಸಿಕೆ ಹಾಕಿಸಿಕೊಳ್ಳಬೇಕು ಅಂತ ಪ್ರಶ್ನಿಸಿದ್ದಾರೆ. ಈಗಾಗಲೇ ಬೋಲ್ಸೊನಾರೋ ಲಸಿಕೆ ಹಾಕಿಸಿಕೊಳ್ಳಿಲ್ಲ ಅಂತ ಹಲವು ಕಡೆ ಅವಮಾನ ಎದುರಿಸಿದ್ಧಾರೆ. ಅಮೆರಿಕಾಗೆ ಹೋದಾಗ ನ್ಯೂಯಾರ್ಕ್ ಹೋಟೆಲ್​ಗಳಿಗೆ ಪ್ರವೇಶ ಕೊಡದೇ ರಸ್ತೆ ಬದಿ ನಿಂತ್ಕೊಂಡು ಪಿಜ್ಜಾ ತಿಂದಿದ್ರು. ಇತ್ತೀಚೆಗೆ ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಹೋದಾಗಲೂ ಅವರನ್ನು ಒಳಗೆ ಬಿಟ್ಟಿರಲಿಲ್ಲ.

-masthmagaa.com

Contact Us for Advertisement

Leave a Reply