ಜಾತಿಗಣತಿ ನಡೆಯಬೇಕು: ಮೋದಿಗೆ ನಿತೀಶ್ ನೇತೃತ್ವದ ನಿಯೋಗ ಮನವಿ!

masthmagaa.com:

ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿ ನಡೆಸಬೇಕು ಅಂತ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ನಿಯೋಗ ಇವತ್ತು ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಸಲ್ಲಿಸಿದೆ. ಬಿಹಾರದ ಒಟ್ಟು 11 ಪಕ್ಷದ ನಾಯಕರು ಈ ನಿಯೋಗದಲ್ಲಿದ್ರು. ರಾಜಕೀಯದಲ್ಲಿ ನಿತೀಶ್ ಅವರ ಬದ್ಧ ವಿರೋಧಿ ನಾಯಕ ಎನಿಸಿಕೊಂಡಿರೋ ಆರ್​ಜೆಡಿಯ ತೇಜಸ್ವಿ ಯಾದವ್ ಕೂಡ ಈ ನಿಯೋಗದಲ್ಲಿದ್ರು. ಪ್ರಧಾನಿ ಭೇಟಿಯಾದ ಬಳಿಕ ಮಾತನಾಡಿದ ನಿತೀಶ್ ಕುಮಾರ್, ಪ್ರಧಾನಿಗಳು ನಮ್ಮ ಬೇಡಿಕೆಯನ್ನ ಆಲಿಸಿದ್ದಾರೆ. ಈಗ ಏನಿದ್ರೂ ಅವರು ನಿರ್ಧಾರ ತಗೋಬೇಕು. ಬಿಹಾರ ಮಾತ್ರವಲ್ಲ ಇಡೀ ದೇಶದ ಜನ ಜಾತಿ ಆಧಾರಿತ ಜನಗಣತಿ ಬೇಕು ಅಂತಿದ್ದಾರೆ ಎಂದಿದ್ದಾರೆ. ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಇದನ್ನೇ ಹೇಳಿದ್ದಾರೆ. AIMIM ಪಕ್ಷದ ಅಸಾದುದ್ದಿನ್ ಓವೈಸಿ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಜಾತಿಗಣತಿ ತುಂಬಾ ಇಂಪಾರ್ಟೆಂಟ್​. ಹೀಗಾಗಿ ಪ್ರಧಾನಿ ಮೋದಿ ಇದಕ್ಕೆ ಸಂಬಂಧಿಸಿದಂತೆ ಒಂದು ಕಾನೂನು ಜಾರಿಗೆ ತರಬೇಕು ಅಂತ ಆಗ್ರಹಿಸಿದ್ದಾರೆ. ಕಾಂಗ್ರೆಸ್​ನ ಅಜಿತ್ ಶರ್ಮಾ ಮಾತನಾಡಿ, ಮೀಸಲಾತಿಯಲ್ಲಿ ಪಾರದರ್ಶಕತೆ ಬರಬೇಕು ಅಂದ್ರೆ ಯಾವ ವರ್ಗದ ಜನ ಹಿಂದುಳಿದಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಾಗಬೇಕು. ಆಗ ಮಾತ್ರ ಅದು ಸಾಧ್ಯ ಎಂದಿದ್ದಾರೆ.

-masthmagaa.com

Contact Us for Advertisement

Leave a Reply