ಪಾಕ್ ಸೇನಾಧ್ಯಕ್ಷರ ಅಧಿಕಾರಾವಧಿ ವಿಸ್ತರಣೆ ಬಗ್ಗೆ ಇಮ್ರಾನ್ ಖಾನ್ ಹೇಳಿದ್ದೇನು?

masthmagaa.com:

ಇದೇ ವರ್ಷ ನವೆಂಬರ್​​​ನಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಅಧಿಕಾರಾವಧಿ ಅಂತ್ಯವಾಗ್ತಿದೆ. ಇವರ ಅಧಿಕಾರಾವಧಿ ವಿಸ್ತರಣೆಯಾಗುತ್ತಾ ಅನ್ನೋ ಚರ್ಚೆ ಜೋರಾಗಿದೆ. ಯಾಕಂದ್ರೆ ಪಾಕಿಸ್ತಾನದಲ್ಲಿ ಸರ್ಕಾರವನ್ನು ಕೂಡ ನಿಯಂತ್ರಿಸೋದು ಸೇನೆ ಅನ್ನೋದು ಪ್ರಪಂಚಕ್ಕೆ ಗೊತ್ತಿರೋ ಸತ್ಯ.. ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರೋ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಬಜ್ವಾ ಸೇನಾ ಮುಖ್ಯಸ್ಥರ ಹುದ್ದೆಯಲ್ಲಿ ಮುಂದುವರಿಯೋ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಈಗ ವರ್ಷ ಶುರುವಾಗಿದೆ ಅಷ್ಟೆ. ಅದಕ್ಕೆ ನವೆಂಬರ್​ವರೆಗೆ ಸಮಯ ಇದೆ. ಈಗಲೇ ಆ ಬಗ್ಗೆ ಚಿಂತೆ ಯಾಕೆ ಅಂತ ಪ್ರಶ್ನಿಸಿದ್ದಾರೆ. ಅಂದಹಾಗೆ ಖಮರ್ ಜಾವೇದ್ ಬಜ್ವಾರ ಮೂರು ವರ್ಷಗಳ ಅಧಿಕಾರಾವಧಿ 2019ರ ನವೆಂಬರ್ 29ರಂದೆ ಅಂತ್ಯಗೊಂಡಿತ್ತು. ಆದ್ರೆ ಇಮ್ರಾನ್ ಖಾನ್ ಭದ್ರತೆ ಕಾರಣ ನೀಡಿ, ಮತ್ತೆ ಅವರ ಅಧಿಕಾರಾವಧಿಯನ್ನು ಮತ್ತೆ ಮೂರು ವರ್ಷಕ್ಕೆ ವಿಸ್ತರಿಸಿದ್ರು. ಆದ್ರೆ ಇದಕ್ಕೆ ಸುಪ್ರೀಂಕೋರ್ಟ್​ ಅಡ್ಡಿಪಡಿಸಿ, ಸರ್ಕಾರ ಸಂಸತ್​ನಲ್ಲಿ ಈ ಸಂಬಂಧ ಮಸೂದೆಯನ್ನೇ ಪಾಸ್ ಮಾಡಿತ್ತು. ಆದ್ರೆ ಈ ಸಲ ಸೇನೆ ಮತ್ತು ಇಮ್ರಾನ್ ಖಾನ್ ಸರ್ಕಾರದ ನಡುವೆ ಎಲ್ಲವೂ ಸರಿಯಿಲ್ಲ.. ಐಎಸ್​ಐ ಮುಖ್ಯಸ್ಥರ ನೇಮಕದ ವಿಚಾರದಲ್ಲಿ ಶುರುವಾದ ಸಂಘರ್ಷ ಈಗಲೂ ಮುಂದುವರಿದಿದೆ ಅಂತ ಹೇಳಲಾಗ್ತಿದೆ. ಹೀಗಾಗಿ ಇಮ್ರಾನ್ ಖಾನ್ ಯಾವ ನಿರ್ಧಾರ ತಗೊಳ್ತಾರೆ ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದೆ.

-masthmagaa.com

Contact Us for Advertisement

Leave a Reply