ಬೆಳಗಾವಿಯನ್ನ ಕೇಂದ್ರಾಡಳಿತ ಪ್ರದೇಶ ಮಾಡುವಂತೆ ಮಹಾರಾಷ್ಟ್ರ ಕಿರಿಕ್

masthmagaa.com:

ಬೆಳಗಾವಿ ವಿಚಾರವಾಗಿ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇದೀಗ ಬೆಳಗಾವಿಯನ್ನ ಕೇಂದ್ರಾಡಳಿತ ಪ್ರದೇಶ ಅಂತ ಘೋಷಿಸಬೇಕು ಅಂತ ಮತ್ತೊಂದು ಖ್ಯಾತೆ ತೆಗೆದಿದ್ದಾರೆ. ಇಷ್ಟು ಮಾತ್ರವಲ್ಲ, ಈ ವಿವಾದದ ಬಗ್ಗೆ ಕೋರ್ಟ್​ನಲ್ಲಿ ವಿಚಾರಣೆ ನಡೀತಿರುವಾಗಲೇ ಕರ್ನಾಟಕ ಸರ್ಕಾರ ಉದ್ದೇಶಪೂರ್ವಕವಾಗಿ ಅದರ ಹೆಸರನ್ನ ಬದಲಾಯಿಸಿದೆ. ಬೆಳಗಾಂ ಅನ್ನೋದನ್ನ ಬೆಳಗಾವಿ ಮಾಡಿದೆ. ಈ ಪ್ರದೇಶದಲ್ಲಿ ಮರಾಠಿ ಭಾಷೆ ಮಾತನಾಡುವ ಜನರ ಮೇಲೆ ದೌರ್ಜನ್ಯ ನಡೀತಿದೆ. ಹೀಗಾಗಿ ಕೋರ್ಟ್​ನಲ್ಲಿ ವಿವಾದ ಬಗೆಹರಿಯೋವರೆಗೆ ಈ ಪ್ರದೇಶವನ್ನ ಕೇಂದ್ರಾಡಳಿತ ಪ್ರದೇಶ ಅಂತ ಘೋಷಿಸಬೇಕು. ಈ ಸಂಬಂಧ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್​ ಮೊರೆ ಹೋಗುತ್ತೆ ಅಂತ ಉದ್ಧವ್ ಠಾಕ್ರೆ ಹೇಳಿದ್ದಾರೆ. ಅಂದ್ಹಾಗೆ ಡಾ. ದೀಪಕ್ ಪವಾರ್ ಅನ್ನೋರು ಮರಾಠಿ ಭಾಷೆಯಲ್ಲಿ ಬರೆದ ‘ಮಹಾರಾಷ್ಟ್ರ-ಕರ್ನಾಟಕ ಸೀಮಾವಾದ್‌: ಸಂಘರ್ಷ್‌ ಅನಿ ಸಂಕಲ್ಪ್‌’ (ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಹೋರಾಟ ಮತ್ತು ಪ್ರತಿಜ್ಞೆ) ಎಂಬ 530 ಪುಟಗಳ ಪುಸ್ತಕ ಬಿಡುಗಡೆ ಮಾಡಿ ಈ ರೀತಿ ಹೇಳಿದ್ದಾರೆ.

ಇನ್ನು ಉದ್ಧವ್ ಠಾಕ್ರೆ ಹೇಳಿಕೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ‘ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಎಲ್ಲಾ ಹಂತಗಳಲ್ಲಿ ಫೇಲ್ ಆಗಿದ್ದಾರೆ. ಹೀಗಾಗಿ ಭಾವನಾತ್ಮಕವಾಗಿ ಬ್ಲಾಕ್​ಮೇಲ್ ಮಾಡೋಕೆ ಪದೇಪದೆ ಬೆಳಗಾವಿ ವಿಚಾರ ಮಾತಾಡ್ತಿದ್ದಾರೆ. ಮಹಾಜನ್ ವರದಿಯನ್ನ ಎಲ್ಲರೂ ಒಪ್ಪಿಕೊಂಡಾಗಿದೆ. ಅದರ ಬಗ್ಗೆ ಹೆಚ್ಚು ಚರ್ಚಿಸೋ ಅಗತ್ಯವಿಲ್ಲ’ ಎಂದಿದ್ದಾರೆ.

-masthmagaa.com

Contact Us for Advertisement

Leave a Reply