ಕಿರುತೆರೆಗೆ ರೀ ಎಂಟ್ರಿ ಕೊಟ್ಟ ದೀಪಿಕಾ ದಾಸ್‌ !

masthmagaa.com:

ಕನ್ನಡ ಕಿರುತೆರೆಯ ಜನಪ್ರಿಯ ನಟಿ ದೀಪಿಕಾ ದಾಸ್‌ ಕಲರ್ಸ್‌ ಕನ್ನಡದ ಹೊಸ ಧಾರಾವಾಹಿ ʻʻಅಂತರಪಟʼʼದಲ್ಲಿ ಅಭಿನಯಿಸುತ್ತಿದ್ದಾರೆ. ನಾಗಿಣಿ ಸೀರಿಯಲ್ ಮೂಲಕ ಮನೆಮಾತಾಗಿದ್ದ ದೀಪಿಕಾ, ಬಳಿಕ ಬಿಗ್ ಬಾಸ್ ಮೂಲಕ ಸದ್ದು ಮಾಡಿದ್ದರು. ಬಿಗ್ ಬಾಸ್ ನ ಎರಡು ಸೀಸನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ, ಅತ್ಯುತ್ತಮ ರೀತಿಯಲ್ಲಿ ಸ್ಪರ್ಧಿಸಿದ್ದರು. ಇನ್ನು ನಾಗಿಣಿ ಸೀರಿಯಲ್ ಬಳಿಕ ಸೀರಿಯಲ್ ಗಳಿಂದ ದೂರವೇ ಉಳಿದಿದ್ದ ನಟಿ ದೀಪಿಕಾ ದಾಸ್ ಇದೀಗ ಕಲರ್ಸ್‌ ಕನ್ನಡದ ಹೊಸ ಧಾರವಾಹಿ ʻʻಅಂತರಪಟʼʼದ ಮೂಲಕ ಕಿರುತೆರೆಗೆ ರೀ ಎಂಟ್ರಿ ಕೊಡ್ತಿದ್ದಾರೆ. ಈ ಸೀರಿಯಲ್ ನಲ್ಲಿ ದೀಪಿಕಾ ದಾಸ್ ಸಮೀರ ಪಾತ್ರದ ಮೂಲಕ ಮಿಂಚಲಿದ್ದಾರೆ. ಈ ಬಗ್ಗೆ ನಟಿ ಇನ್ ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿಕೊಂಡು, ಇದೀಗ ನಾನು ಸಮೀರ ಆಗಿ ‘ಅಂತರಪಟ’ ಸೀರಿಯಲ್ ನಲ್ಲಿ ನಟಿಸುತ್ತಿದ್ದೇನೆ. ತಪ್ಪದೇ ಸೀರಿಯಲ್ ನ ಎಲ್ಲಾ ಎಪಿಸೋಡ್ ನೋಡಿ ಎಂದು ಬರೆದುಕೊಂಡಿದ್ದಾರೆ.

ಈ ವಾರದಿಂದ ಪ್ರಸಾರವಾಗಿರುವ ʻʻಅಂತರಪಟʼʼ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ತನ್ವಿಯಾ ಬಾಲರಾಜ್‌ ಹಾಗೂ ಚಂದನ್‌ ಗೌಡ ಅಭಿನಯಿಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply