ಸುಂದರ್​​ಲಾಲ್ ಬಹುಗುಣಗೆ ಭಾರತ ರತ್ನ ನೀಡಿ: ದೆಹಲಿ ಸರ್ಕಾರ

masthmagaa.com:

ಚಿಪ್ಕೋ ಚಳುವಳಿಯ ನಾಯಕ ಸುಂದರ್​ಲಾಲ್ ಬಹುಗುಣ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ದೆಹಲಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಈ ಸಂಬಂಧ ದೆಹಲಿ ವಿಧಾನಸಭೆಯಲ್ಲಿ ನಿರ್ಣಯವನ್ನ ಪಾಸ್ ಮಾಡಲಾಗಿದೆ. ಅಂದ್ಹಾಗೆ ಸುಂದರ್​ಲಾಲ್​ ಬಹುಗುಣ ಈ ವರ್ಷದ ಮೇನಲ್ಲಿ ಕೊರೋನಾದಿಂದ ಮೃತಪಟ್ಟಿದ್ದರು. ಮಹಾನ್​ ಪರಿಸರವಾದಿಯಾಗಿದ್ದ ಇವರು 1970ರ ದಶಕದಲ್ಲಿ ಉತ್ತರಾಖಂಡ್​​ನಲ್ಲಿ ಕಂಟ್ರಾಕ್ಟರ್​ಗಳು ಮರ ಕಡಿಯೋಕೆ ಮುಂದಾದಾಗ ಮರಕ್ಕೆ ಅಪ್ಪಿಕೊಂಡು ಚಿಪ್ಕೋ ಚಳುವಳಿ ಆರಂಭಿಸಿದ್ರು. ಮುಂದೆ 1983ರಲ್ಲಿ ಕರ್ನಾಟಕದ ಪರಿಸರವಾದಿ ಪಾಂಡುರಂಗ ಹೆಗ್ಡೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮರಗಳನ್ನ ಉಳಿಸಲು ಅಪ್ಪಿಕೋ ಚಳುವಳಿಯನ್ನ ಶುರು ಮಾಡಿದ್ರು. ಸುಂದರ್​ಲಾಲ್​ ಬಹುಗುಣಗೆ 1987ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತ್ತು. ಆದ್ರೆ ಅದನ್ನ ಅವರು ನಿರಾಕರಿಸಿದ್ರ. 2009ರಲ್ಲಿ ಭಾರತ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸ್ತು. ಇದೀಗ ಭಾರತ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನ ಮರಣೋತ್ತರವಾಗಿ ನೀಡುವಂತೆ ದೆಹಲಿಯ ಕೇಜ್ರಿವಾಲ್​ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.

-masthmagaa.com

Contact Us for Advertisement

Leave a Reply