ಮುಂದುವರೆದ ದೆಹಲಿ Vs ಕೇಂದ್ರ ಸರ್ಕಾರದ ಬಿಕ್ಕಟ್ಟು! ಮಧ್ಯಪ್ರವೇಶಿಸುತ್ತಾ ಸುಪ್ರೀಂಕೋರ್ಟ್‌?

masthmagaa.com:

ದೆಹಲಿಯಲ್ಲಿ ಗ್ರೂಪ್‌-ಎ ಅಧಿಕಾರಿಗಳ ವರ್ಗಾವಣೆ ಮತ್ತು ಶಿಸ್ತು ಪ್ರಕ್ರಿಯೆಗಳ ಉಸ್ತುವಾರಿಗಾಗಿ ʻರಾಷ್ಟ್ರ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರʼವನ್ನ ರಚಿಸಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಪೊಲೀಸ್‌, ಸಾರ್ವಜನಿಕ ಸುವ್ಯವಸ್ಥೆ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಸೇವೆಗಳನ್ನ ಹೊರತುಪಡಿಸಿ ದೆಹಲಿಯಲ್ಲಿ ಸರ್ಕಾರಿ ಸೇವೆಗಳ ನಿಯಂತ್ರಣವನ್ನ ಚುನಾಯಿತ ಸರ್ಕಾರಕ್ಕೆ ವಹಿಸಿ ಸುಪ್ರೀಂಕೋರ್ಟ್‌ ತೀರ್ಪು ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಡೆ ಅನುಸರಿಸಿದ್ದು, ಮತ್ತೊಮ್ಮೆ ದಹಲಿ ಸರ್ಕಾರದ ಆಕ್ರೋಶಕ್ಕೆ ಗುರಿಯಾಗಿದೆ. ಸುಪ್ರೀಂಕೋರ್ಟ್‌ ತೀರ್ಪನ್ನ ರದ್ದುಗೊಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಅಂತ ಆಪ್‌ ಆರೋಪಸಿದೆ. ಇನ್ನೊಂದ್‌ ಕಡೆ ದೆಹಲಿ ಅಧಿಕಾರ ನಿಯಂತ್ರಣ ಕುರಿತಂತೆ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನ ಮತ್ತೊಮ್ಮೆ ಪರಿಶೀಲನೆ ನಡೆಸ್ಬೇಕು ಅಂತ ಕೋರಿ ಕೇಂದ್ರ ಅರ್ಜಿ ಸಲ್ಲಿಸಿದೆ. ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಕುರಿತಂತೆ ಸಂಪೂರ್ಣ ವರದಿಯೊಂದನ್ನ ಮಾಡಲಾಗಿದೆ. ನೀವು ಅದನ್ನ ಚೆಕ್‌ ಮಾಡಬಹುದು.

-masthmagaa.com

Contact Us for Advertisement

Leave a Reply