ನಂಗೆ ಜೈಲು ಅಂದ್ರೆ ಭಯವಿಲ್ಲ: ಕೇಜ್ರಿವಾಲ್‌

masthmagaa.com:

ದೆಹಲಿ ಸಿಎಂ ಮತ್ತು AAP ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ಗೆ ಜೈಲು ಸೇರೋ ಗುಮಾನಿ ಎದುರಾಗಿದೆ ಅನ್ಸತ್ತೆ. ಇಂದು ಬೆಳಿಗ್ಗೆ ಕೇಜ್ರಿವಾಲ್‌ ದೆಹಲಿ ಅಬಕಾರಿ ನೀತಿ ಅಕ್ರಮದ ಕೇಸ್‌ನ ವಿಚಾರವಾಗಿ ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳ ಮುಂದೆ ಹಾಜರಾಗ್ಬೇಕಿತ್ತು. ಆದ್ರೆ ಅದನ್ನ ಸ್ಕಿಪ್‌ ಮಾಡಿ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ರೋಡ್‌ ಷೋ ನಡೆಸಿದ್ದಾರೆ. ಈ ವೇಳೆ “ನನಗೆ ಜೈಲು ಅಂದ್ರೆ ಭಯ ಇಲ್ಲ. ಕೌಂಟಿಂಗ್‌ ದಿನ ನಾನು ಜೈಲಲ್ಲಿರ್ತೀನೋ, ಬೇರೆ ಎಲ್ಲಾದ್ರು ಇರ್ತೀನೋ ಗೊತ್ತಿಲ್ಲ” ಅಂದಿದಾರೆ. ಈ ಬಗ್ಗೆ ರಿಪ್ಲೈ ಮಾಡಿರೊ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ “ಕೇಜ್ರಿವಾಲ್‌ ED ಗೆ ಹೆದರಿ ಓಡಿ ಹೋಗಿದ್ದಾರೆ. ದೆಹಲಿ ಲಿಕ್ಕರ್‌ ಸ್ಕ್ಯಾಮ್‌ ಕಿಂಗ್‌, ತಾನು ಸ್ಕ್ಯಾಮ್‌, ಬ್ರಷ್ಟಾಚಾರ ಮಾಡಿರೋದಾಗಿ ಒಪ್ಕೊಂಡಿದ್ದಾರೆ. ED ರ‍್ಯಾಂಡಮ್‌ ಆಗಿ ಯಾರಿಗು ಸಮನ್ಸ್‌ ನೀಡಲ್ಲ. ಆಧಾರ ಇದ್ದೇ ನೀಡಿರುತ್ತೆ” ಅಂದಿದ್ದಾರೆ. ನಿನ್ನೆಯಷ್ಟೇ ಕೇಜ್ರಿವಾಲ್‌ “ನನ್ನ ಇಮೇಜ್‌, ರೆಪ್ಯುಟೇಶನ್‌ಗಳನ್ನ ED ಹಾಳು ಮಾಡಿದೆ. ನನ್ನ ಕೈಗೆ ಸಮನ್ಸ್‌ ಸೇರೊ ಮುನ್ನವೆ BJP ನಾಯಕರು ನಾನು ಅರೆಸ್ಟ್‌ ಆಗ್ತೇನೆ ಅಂತ ಭವಿಷ್ಯ ಹೇಳಿದ್ರು. ED ಕೆಲವು ಸೆಲೆಕ್ಟೆಡ್‌ BJP ನಾಯಕರಿಗೆ ಸಮನ್ಸ್‌ ಪ್ರತಿಯನ್ನ ಲೀಕ್‌ ಮಾಡಿದೆ. ಇದು ಕೇಂದ್ರ ಸರ್ಕಾರದ ಪ್ರೇರೇಪಿತ ಕೆಲಸ, ಕಾನೂನಿನ ಅಡಿಯಲ್ಲಿ ಇದಕ್ಕೆ ನಿಲುವಿಲ್ಲ” ಅಂತ ಆರೋಪಿಸಿದ್ರು. ಅಂದ್ಹಾಗೆ BJP MP ಮನೋಜ್‌ ತಿವಾರಿ ಅಕ್ಟೋಬರ್‌ 30ರ ಮಧ್ಯಾಹ್ನ ಕೇಜ್ರಿವಾಲ್‌ ಅರೆಸ್ಟ್‌ ಆಗ್ತಾರೆ ಅಂತ ಹೇಳಿಕೆ ನೀಡಿದ್ರು. ಅದೇ ಸಂಜೆ ED ದೆಹಲಿ ಅಬಕಾರಿ ನೀತಿ ಸ್ಕ್ಯಾಮ್‌ ಕೇಸ್‌ನ ವಿಚಾರಣೆಗಾಗಿ ಕೇಜ್ರಿವಾಲ್‌ಗೆ ಸಮನ್ಸ್‌ ನೀಡಿ ಇಂದು ಹಾಜರಾಗುವಂತೆ ಹೇಳಿತ್ತು.

-masthmagaa.com

Contact Us for Advertisement

Leave a Reply