ದೆಹಲಿಯಲ್ಲಿ ಕೊರೋನಾ ಹಾವಳಿ: ಒಂದೇ ದಿನ 923 ಕೇಸ್

masthmagaa.com:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇವತ್ತು 923 ಕೊರೋನಾ ಪ್ರಕರಣ ದೃಢಪಟ್ಟಿದೆ. ಏಳು ತಿಂಗಳ ಬಳಿಕ ದೃಢಪಟ್ಟ ಹೈಯೆಸ್ಟ್ ಕೇಸ್​ ಇದು. ನಿನ್ನೆಗೆ ಹೋಲಿಸಿದ್ರೆ ಆಲ್ಮೋಸ್ಟ್ ಡಬಲ್ ಅನ್ಬೋದು​​. ಇನ್ನೊಂದು ವಿಚಾರ ಅಂದ್ರೆ ಹೈಯೆಸ್ಟ್ ಒಮೈಕ್ರಾನ್​ ಪ್ರಕರಣ ಕೂಡ ವರದಿಯಾಗಿರೋದು ದೆಹಲಿಯಲ್ಲೇ. ಇದನ್ನೆಲ್ಲಾ ಅರಿತುಕೊಂಡೇ ನಿನ್ನೆ ದೆಹಲಿ ಸರ್ಕಾರ ಅರ್ಧ ಲಾಕ್​ಡೌನ್​ ಮಾಡೋ ನಿರ್ಧಾರ ತೆಗೆದುಕೊಂಡಿದ್ದು. ವಿವಿಧ ರೀತಿಯ ನಿರ್ಬಂಧಗಳ ಎಫೆಕ್ಟ್ ಇವತ್ತು ಕಾಣಿಸ್ತು. ಬಸ್​ ಮತ್ತು ಮೆಟ್ರೋಗಳಲ್ಲಿ 50 ಪರ್ಸೆಂಟ್​ ಕೆಪಾಸಿಟಿಗೆ ಮಾತ್ರ ಅವಕಾಶ ನೀಡಿದ ಹಿನ್ನೆಲೆ ಮೆಟ್ರೋ ನಿಲ್ದಾಣಗಳ ಮುಂದೆ ಉದ್ದನೆಯ ಸರತಿ ಸಾಲು ಕಾಣಿಸ್ತು. ಬಸ್​​ ಸ್ಟಾಪ್​ಗಳಲ್ಲಿ ಜನ ತಾ ಮುಂದು ನಾಮುಂದು ಅಂತ ಹತ್ತೋಕೆ ಸರ್ಕಸ್​ ಪಟ್ಟ ದೃಶ್ಯಗಳು ಕಂಡುಬಂತು.

-masthmagaa.com

Contact Us for Advertisement

Leave a Reply