ಗಂಡನನ್ನೇ, ತುಂಡು ಮಾಡಿ ರಸ್ತೆಯುದ್ದಕ್ಕೂ ಎಸೆದಳು..9 ವರ್ಷದ ಕೇಸ್ ಬೆಳಕಿಗೆ..!

ದೆಹಲಿಯಲ್ಲಿ 9 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಕೇಸ್ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 2011ರಲ್ಲಿ ಶಕುಂತಲಾ ಎಂಬುವವರನ್ನು ರವಿ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದ್ರೆ ಶಕುಂತಲಾಗೆ ಮೊದಲೇ ಕಮಲ್ ಎಂಬುವವರ ಜೊತೆ ಸಂಬಂಧವಿತ್ತು. ಆಕೆ ಮದುವೆಯಾದ ಬಳಿಕವೂ ಈ ಸಂಬಂಧವನ್ನು ಮುಂದುವರಿಸಿದ್ದಾಳೆ. ನಂತರ ಕಮಲ್ ಜೊತೆ ಸೇರಿಕೊಂಡು ರವಿ ಕೊಲೆಗೆ ಸ್ಕೆಚ್ ಹಾಕಿದ್ದಾರೆ. ಮೊದಲಿಗೆ ಪತಿಯ ಜೊತೆ ತಂಗಿಯ ಮನೆಗೆ ಹೊರಟಿದ್ದರು. ಆ ಕ್ಯಾಬ್ ಡ್ರೈವರ್ ಕೂಡ ಇವರ ಪ್ಲಾನ್‍ನ ಭಾಗವಾಗಿದ್ದ. ಮಧ್ಯದಾರಿಯಲ್ಲಿ ಕಮಲ್ ಕೂಡ ಕಾರ್ ಹತ್ತಿದ್ದಾರೆ. ನಂತರ ಕಾರ್‍ನಲ್ಲೇ ರವಿಯನ್ನು ಕೊಲೆಗೈದು ರಸ್ತೆಯುದ್ದಕ್ಕೂ 25 ತುಂಡು ಮಾಡಿ ಎಸೆದಿದ್ದಾರೆ. ಉಳಿದ ಭಾಗವನ್ನು ಹೂತು ಹಾಕಿದ್ದರು. ಅದರಿಂದ ಪೊಲೀಸರಿಗೆ 15 ಮೂಳೆಗಳು ಸಿಕ್ಕಿದ್ದವು.

ಮೊದಲಿಗೆ ಪೊಲೀಸರಿಗೆ ಈ ಕೇಸ್ ಬೇಧಿಸಲು ಸಾಧ್ಯವಾಗಿರಲಿಲ್ಲ. ಆದ್ರೆ 2017ರಲ್ಲಿ ಕಾರ್ ಡ್ರೈವರ್ ಬಂಧಿಸಿದ ಪೊಲೀಸರು ಬ್ರೈನ್ ಮ್ಯಾಪಿಂಗ್ ಟೆಸ್ಟ್ ಮಾಡಿದ್ದಾರೆ. ನಂತರ ಕಮಲ್ ಮತ್ತು ಶಕುಂತಲಾ ಮನೆಯಿಂದ ಓಡಿಹೋಗಿ ತಲೆಮರೆಸಿಕೊಂಡಿದ್ದರು. ಆದ್ರೆ ಕಮಲ್ ಅಲ್ವಾರ್‍ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಈಗ ಗರ್ಭಿಣಿಯಾಗಿರೋ ಶಕುಂತಲಾ ನಾಪತ್ತೆಯಾಗಿದ್ದು ಇನ್ನೂ ಪತ್ತೆಯಾಗಿಲ್ಲ.

Contact Us for Advertisement

Leave a Reply