ಒಮೈಕ್ರಾನ್ ಭೀತಿ: ದೆಹಲಿಯಲ್ಲಿ ಭಾಗಶಃ ಲಾಕ್​ಡೌನ್ ಜಾರಿ

masthmagaa.com:

ಒಮೈಕ್ರಾನ್ ಹಾವಳಿ ಹೆಚ್ಚಾಗ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಈ ಕ್ಷಣದಿಂದಲೇ ಅನ್ವಯವಾಗುವಂತೆ ಈ ರೂಲ್ಸ್​ಗಳನ್ನು ಜಾರಿಗೆ ತರಲಾಗಿದೆ.
-ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ
-ಅಗತ್ಯ ಸೇವೆಗಳು ಹೊರತುಪಡಿಸಿ ಉಳಿದೆಲ್ಲಾ ಖಾಸಗಿ ಕಚೇರಿಗಳು 50 ಪರ್ಸೆಂಟ್​​ನೊಂದಿಗೆ ಕೆಲಸ
-ಮದುವೆ ಮತ್ತು ಅಂತ್ಯಕ್ರಿಯೆಗೆ 20 ಜನರಿಗೆ ಮಾತ್ರ ಅವಕಾಶ
-ಮಾಲ್ ಮತ್ತು ಅಂಗಡಿ-ಮುಂಗಟ್ಟುಗಳು ಬೆಳಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಸಮ-ಬೆಸ ಸಂಖ್ಯೆ ಆಧಾರದಲ್ಲಿ ತೆರೆಯಲು ಅವಕಾಶ
-ಥಿಯೇಟರ್, ಮಲ್ಟಿಪ್ಲೆಕ್ಸ್​, ಜಿಮ್​ಗಳು, ಶಾಲಾ, ಕಾಲೇಜುಗಳು ಬಂದ್
-ಬಾರ್ 50 ಪರ್ಸೆಂಟ್​ನೊಂದಿಗೆ ರಾತ್ರಿ 10 ಗಂಟೆವರೆಗೆ ಓಪನ್​​
-ಮೆಟ್ರೋ ಅರ್ಧದಷ್ಟು ಕೆಪಾಸಿಟಿಯೊಂದಿಗೆ ಕಾರ್ಯನಿರ್ವಹಣೆ
-ಸಲೂನ್ ಪಾರ್ಲರ್ ಸೇರಿ ಅಗತ್ಯ ಸೇವೆಗಳು ಎಂದಿನಂತೆ
-ರಾಜಕೀಯ, ಧಾರ್ಮಿಕ ಮತ್ತು ಹಬ್ಬಕ್ಕೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ನಿರ್ಬಂಧ

-masthmagaa.com

Contact Us for Advertisement

Leave a Reply