ದೆಹಲಿಯಲ್ಲಿ ವಾಯುವಾಲಿನ್ಯ: ಒಂದು ವಾರ ಲಾಕ್​ಡೌನ್​!

masthmagaa.com:

ಕಳೆದೊಂದು ವಾರದಿಂದ ಫಾಗ್​​ ಮತ್ತು ವಾಯುಮಾಲಿನ್ಯವನ್ನು ಹೊದ್ದುಕೊಂಡಿರೋ ದೆಹಲಿ ಮತ್ತು ಅಕ್ಕಪಕ್ಕದ ನಗರಗಳ ವಿಚಾರವಾಗಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ​ ಚಾಟಿ ಬೀಸಿದೆ. ಎಂಥಾ ಕೆಟ್ಟ ಪರಿಸ್ಥಿತಿ ಇದೆ ಅಂತ ನೋಡಿ.. ನಾವು ಮನೆಯಲ್ಲೂ ಕೂಡ ಮಾಸ್ಕ್​ ಧರಿಸೋ ಪರಿಸ್ಥಿತಿ ಇದೆ. ಈ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಏನು..? ಸದ್ಯದ ಪರಿಸ್ಥಿತಿ ನಿಭಾಯಿಸಲು ಯಾವ ಕ್ರಮ ಕೈಗೊಂಡಿದ್ದೀರಿ ಅಂತ ಹೇಳಿ..ಎರಡು ದಿನ ಲಾಕ್​ಡೌನ್ ಮಾಡ್ತೀರಾ..? ಏರ್​ ಕ್ವಾಲಿಟಿ ಇಂಡೆಕ್ಸ್​ ಲೆವೆಲ್ ಇಳಿಸಲು ನಿಮ್ಮ ಪ್ಲಾನ್ ಏನಂತ ಹೇಳಿ ಅಂತ ಪ್ರಶ್ನಿಸಿದೆ. ಅದ್ರ ಬೆನ್ನಲ್ಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತುರ್ತು ಸಭೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಶಾಲಾ ಕಾಲೇಜುಗಳನ್ನು ಒಂದು ವಾರದವರೆಗೆ ಮುಚ್ಚಬೇಕು. ಸರ್ಕಾರಿ ಅಧಿಕಾರಿಗಳು ವರ್ಕ್​ ಫ್ರಂ ಹೋಂ ಮಾಡ್ಬೇಕು ಅಂತ ಆದೇಶಿಸಿದ್ದಾರೆ.

-masthmagaa.com

Contact Us for Advertisement

Leave a Reply