ವಿಶ್ವದಲ್ಲೀಗ ಕೊರೋನಾ ವೇಷಧಾರಿ ಡೆಲ್ಟಾದೇ ಹಾವಳಿ!

masthmagaa.com:

ದಕ್ಷಿಣ ಆಫ್ರಿಕಾದಲ್ಲಿ ಡೆಲ್ಟಾ ವೈರಾಣು ಪತ್ತೆಯಾಗಿದ್ದು, ಅಧ್ಯಕ್ಷ ಸೈರಿಲ್ ರಾಮಫೋಸಾ ಮತ್ತೆ ಕಠಿಣ ನಿರ್ಬಂಧಗಳನ್ನು ಹೇರಿದ್ದಾರೆ. ಸೌಥ್ ಆಫ್ರಿಕಾ ಆಫ್ರಿಕಾ ಖಂಡದಲ್ಲೇ ಕೊರೋನಾ ಹಾವಳಿಗೆ ಹೆಚ್ಚು ಒಳಗಾಗಿಗೋ ದೇಶವಾಗಿದ್ದು, ಈಗ ಮತ್ತೆ ಡೆಲ್ಟಾ ಕಾಟ ಶುರುವಾಗಿದೆ. ನಿನ್ನೆ ಒಂದೇ ದಿನ 15 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಬಂದಿದೆ. ಹೀಗಾಗಿ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಇಲ್ಲಿ ಈವರೆಗೆ 19 ಲಕ್ಷ ಜನರಿಗೆ ಕೊರೋನಾ ಬಂದಿದ್ದು, 59 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಬಿಟ್ಟಿದ್ದಾರೆ. ಇನ್ನು ಆಸ್ಟ್ರೇಲಿಯಾದಲ್ಲೂ ಡೆಲ್ಟಾ ವೈರಾಣು ಹಾವಳಿ ದಿನೇ ದಿನೇ ಜಾಸ್ತಿಯಾಗ್ತಿದ್ದು, ಸಿಡ್ನಿ ಸೇರಿದಂತೆ ಹಲವೆಡೆ ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. 1.8 ಕೋಟಿ ಜನ ಅಂದ್ರೆ ಒಟ್ಟು ಜನಸಂಖ್ಯೆಯ 70 ಪರ್ಸೆಂಟ್​ನಷ್ಟು ಆಸ್ಟ್ರೇಲಿಯನ್ನರು ಈಗ ಕೊರೋನಾ ನಿರ್ಬಂಧಗಳಿಗೆ ಒಳಪಟ್ಟಿದ್ದಾರೆ. ಅದೇ ರೀತಿ ಡೆನ್ಮಾರ್ಕ್​​ನಲ್ಲಿ ಮೊದಲ ಬಾರಿಗೆ ಡೆಲ್ಟಾ ಪ್ಲಸ್ ವೈರಾಣು ಪತ್ತೆಯಾಗಿದೆ. ಈ ವ್ಯಕ್ತಿ ಪೋರ್ಚುಗಲ್​​ನಿಂದ ವಿಮಾನದಲ್ಲಿ ಡೆನ್ಮಾರ್ಕ್​​ಗೆ ಹೋಗಿದ್ದ ಅಂತ ಗೊತ್ತಾಗಿದೆ. ಹೀಗಾಗಿ ಆ ವಿಮಾನದಲ್ಲಿದ್ದವರನ್ನೆಲ್ಲಾ ಟ್ರ್ಯಾಕ್ ಮಾಡಿ, ಕ್ವಾರಂಟೈನ್​​ನಲ್ಲಿ ಇಡಲಾಗಿದೆ.

-masthmagaa.com:

Contact Us for Advertisement

Leave a Reply