ಬಲ ಕಳೆದುಕೊಳ್ತಿರೊ ಪ್ರಜಾಪ್ರಭುತ್ವ! ಏನಿದು IDEA ವರದಿ?

masthmagaa.com:

ಪ್ರಪಂಚದ ಅರ್ಧಕ್ಕರ್ಧ ಪ್ರಜಾಪ್ರಭುತ್ವ ದೇಶಗಳಲ್ಲಿ ಈ ಪರಿಕಲ್ಪನೆಯೇ ನೆಲ ಕಚ್ಚಿದೆ ಅಂತ ಇನ್ಸ್ಟಿಟ್ಯುಟ್‌ ಫಾರ್‌ ಡೆಮಕ್ರಸಿ ಅಂಡ್‌ ಎಲೆಕ್ಟ್ರೊರಲ್‌ ಅಸಿಸ್ಟೆನ್ಸ್(‌IDEA) ಅನ್ನೊ ಒಂದು ಸಂಸ್ಥೆ ಹೇಳಿದೆ . ಸ್ವೀಡನ್‌ ಮೂಲದ ಈ ಸಂಸ್ಥೆ ವಿಶ್ವಾದ್ಯಂತ ಡೆಮಾಕ್ರಟಿಕ್‌ ರಾಷ್ಟ್ರಗಳಲ್ಲಿ ದೋಷಭರಿತ ಚುನಾವಣೆಗಳು, ವಾಕ್‌ ಹಾಗೂ ಸಭೆ ಸೇರೋ ಸ್ವಾತಂತ್ರ್ಯ ಸೇರಿದಂತೆ, ಡೆಮಾಕ್ರಸಿಯಲ್ಲಿ ಮುಖ್ಯವಾಗಿ ಇರ್ಬೇಕಾದ ಹಕ್ಕುಗಳನ್ನ ಹಲವು ದೇಶಗಳಲ್ಲಿ ಕಸಿದುಕೊಳ್ಳಲಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ಬಲ ಕಡಿಮೆಯಾಗ್ತಿದೆ, ಅದರ ಪರಿಕಲ್ಪನೆಗೆ ಧಕ್ಕೆ ಬಂದಿದೆ ಅಂತ ವರದಿಯಲ್ಲಿ ಹೇಳಲಾಗಿದೆ. ಇನ್ನು ಪ್ರಜಾಪ್ರಭುತ್ವವನ್ನ ಕಾಯಬೇಕಾಗಿರೋ ಅಂಶಗಳಾದ ಚುನಾವಣೆ, ಸಂಸತ್ತು ಮತ್ತು ಕೋರ್ಟ್‌ಗಳಲ್ಲಿನ ಲೋಪದೋಷಗಳೇ ಇದಕ್ಕೆ ಕಾರಣ ಅಂತ ಹೇಳಲಾಗಿದೆ. ಇದ್ರಿಂದ ಶಾಸಕಾಂಗಗಳು ವೀಕ್‌ ಆಗ್ತಿವೆ. ಇದನ್ನ ಸರಿ ಮಾಡ್ಬೇಕಾದ್ರೆ ಪತ್ರಿಕೋದ್ಯಮ, ಎಲೆಕ್ಷನ್‌ ಕಮಿಷನ್‌ಗಳು, ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳಿಗೆ ಬಲ ತುಂಬೋದು ಬಹಳ ಇಂಪಾರ್ಟೆಂಟ್‌ ಆಗತ್ತೆ ಅಂತ IDEA ಹೇಳಿದೆ.

-masthmagaa.com

Contact Us for Advertisement

Leave a Reply