ಸಿಎಂ ಯಡಿಯೂರಪ್ಪಗೆ ಬಂಧನದಿಂದ ರಕ್ಷಣೆ ನೀಡಿದ ‘ಸುಪ್ರೀಂ’

masthmagaa.com:

ಸಿಎಂ ಬಿ.ಎಸ್.​ ಯಡಿಯೂರಪ್ಪ ಮತ್ತು ಸಚಿವ ಮುರುಗೇಶ್ ನಿರಾಣಿಗೆ ಅರೆಸ್ಟ್​ನಿಂದ ರಕ್ಷಣೆ ನೀಡಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದ್ರೆ ಎರಡು ಪ್ರಕರಣಗಳಿಗೆ ಮರುಜೀವ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ‘ಸುಪ್ರೀಂ’ ನಿರಾಕರಿಸಿದೆ. ಜನವರಿ 6ನೇ ತಾರೀಖು ಒಂದು ಡಿನೋಟಿಫಿಕೇಶನ್​ ಪ್ರಕರಣ ಹಾಗೂ ಮತ್ತೊಂದು ಉದ್ಯಮಿಯೊಬ್ಬರಿಗೆ ಜಮೀನು ಸ್ಯಾಂಕ್ಷನ್​ಗೆ ಒಪ್ಪಿಗೆ ನೀಡಿ ಬಳಿಕ ಕೈಕೊಟ್ಟಿದ್ದ ಪ್ರಕರಣ ಸಂಬಂಧ ಹೈಕೋರ್ಟ್​ ತೀರ್ಪು ನೀಡಿತ್ತು. ಎರಡೂ ಪ್ರಕರಣಗಳಿಗೆ ಮರುಜೀವ ನೀಡಲು ಅವಕಾಶ ಕೊಟ್ಟಿತ್ತು. ಇದನ್ನ ಪ್ರಶ್ನಿಸಿ ಸಿಎಂ ಯಡಿಯೂರಪ್ಪ ಸುಪ್ರೀಂಕೋರ್ಟ್ ಮೊರೆ ಹೋಗಿದ್ರು. ಇವತ್ತು ವಿಚಾರಣೆ ವೇಳೆ ಸಿಜೆಐ ಎಸ್​.ಎ. ಬೊಬ್ಡೆ, ನೀವು ರಾಜ್ಯದ ಹಾಲಿ ಮುಖ್ಯಮಂತ್ರಿ. ನಿಮ್ಮ ವಿರುದ್ಧ ಯಾರು ಅರೆಸ್ಟ್ ವಾರಂಟ್ ಇಶ್ಯೂ ಮಾಡ್ತಾರೆ. ಹೆಚ್ಚಂದ್ರೆ ಅವರು ನಿಮಗೆ ರಿಕ್ವೆಸ್ಟ್​ ಮಾಡ್ಬೋದು ಅಂತ ಹೇಳಿದ್ರು. ಇದೇ ವೇಳೆ ಯಡಿಯೂರಪ್ಪ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ, ಎರಡು ಪ್ರಕರಣಗಳಿಗೆ ಮರುಜೀವ ನೀಡಿರೋದ್ರಿಂದ ಅರೆಸ್ಟ್ ಆಗುವ ಸಾಧ್ಯತೆ ಇರುತ್ತೆ ಅಂತ ಹೇಳಿದ್ರು. ಕೊನೆಗೆ ಸಿಎಂ ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿಗೆ ಅರೆಸ್ಟ್​ನಿಂದ ರಕ್ಷಣೆ ನೀಡ್ತು ಸುಪ್ರೀಂಕೋರ್ಟ್.

-masthmagaa.com

Contact Us for Advertisement

Leave a Reply