ಮಕ್ಕಳನ್ನು ಮಾರೋ ಸ್ಥಿತಿಯಲ್ಲಿ ಅಫ್ಘಾನಿಸ್ತಾನದ ಜನ!

masthmagaa.com:

ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಟೇಕೋವರ್ ಮಾಡ್ಕೊಂಡ ಬಳಿಕ ದೇಶಕ್ಕೆ ವಿದೇಶಿ ನೆರವು ಎಲ್ಲಾ ರೀತಿಯಲ್ಲಿ ಬಂದ್ ಆಗೋಗಿದೆ. ಹೆಚ್ಚಾಗಿ ವಿದೇಶಿ ನೆರವಿನ ಮೇಲೆ ಅವಲಂಭಿಸಿದ್ದ ಅಫ್ಘಾನಿಸ್ತಾನ ಈಗ ಕಂಗಾಲಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಜನ ಸಾಲದಲ್ಲಿ ಮುಳುಗಿದ್ದು ಅದನ್ನ ತೀರಿಸಲು ತಮ್ಮ ಮಕ್ಕಳನ್ನೇ ಮಾರೋ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಹೇರತ್​ನಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಮಹಿಳೆಯೊಬ್ಬರು ಈ ಬಗ್ಗೆ ನೋವು ತೋಡಿಕೊಂಡಿದ್ದಾರೆ. ನನ್ನ ಮೇಲೆ 40 ಸಾವಿರ ರೂಪಾಯಿ ಸಾಲದ ಹೊರೆಯಿದೆ. ವ್ಯಕ್ತಿಯೊಬ್ಬರಿಂದ ಕುಟುಂಬದ ನಿರ್ವಹಣೆಗಾಗಿ ದುಡ್ಡು ತಗೊಂಡಿದ್ದೆ. ಆದ್ರೀಗ ಕೆಲಸವೂ ಇಲ್ಲ.. ದುಡ್ಡೂ ಇಲ್ಲ. ಸಾಲ ತೀರಿಸೋಕೆ ಆಗ್ತಿಲ್ಲ. ಆದ್ರೆ ಸಾಲ ನೀಡಿದ್ದ ವ್ಯಕ್ತಿ ಒಂದೋ ಸಾಲದ ದುಡ್ಡು ವಾಪಸ್ ಕೊಡು. ಇಲ್ಲವಾದ್ರೆ ನಿನ್ನ 3 ವರ್ಷದ ಮಗಳನ್ನು ನನಗೆ ಕೊಟ್ಟುಬಿಡು ಅಂತ ಕಿರುಕುಳ ನೀಡ್ತಿದ್ದಾನೆ ಅಂತ ಹೇಳಿದ್ದಾರೆ. ಇದು ಒಂದು ಕಡೆಯಾದ್ರೆ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತಲೇ ಇದೆ. ದೇಶದ ಕರೆನ್ಸಿಯ ಮೌಲ್ಯ ಕೂಡ ದಿನೇ ದಿನೇ ಕುಸಿಯುತ್ತಿದೆ. ಆಹಾರ ಪದಾರ್ಥದಲ್ಲೂ ತುಂಬಾ ಕೊರತೆ ಎದುರಾಗ್ತಿದೆ. ಪೂರೈಕೆ ಕಡಿಮೆಯಾಗಿದೆ. ಇದ್ರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.

-masthmagaa.com

Contact Us for Advertisement

Leave a Reply