ಆಪರೇಷನ್ ಸಬ್​ಮರೀನ್​​! ಸಮುದ್ರಾಳದಲ್ಲಿ 53 ಜೀವಗಳು!

masthmagaa.com:

ಇಂಡೋನೇಷ್ಯಾದಲ್ಲಿ ಸಮರಾಭ್ಯಾಸದ ವೇಲೆ ಇದ್ದಕ್ಕಿದ್ದಂತೆ ನಾಪತ್ತೆಯಾದ ಜಲಾಂತರ್ಗಾಮಿ ನೌಕೆಗಾಗಿ ಹುಡುಕಾಟ ಮುಂದುವರಿದಿದೆ. ಈ ನಡುವೆ ಇವತ್ತು ಜಲಾಂತರ್ಗಾಮಿ ನೌಕೆ ರಡಾರ್‌ ಸಂಪ‍ರ್ಕಕ್ಕೆ ಬಂದಿದೆ. ಅದು ಜಲಾಂತರ್ಗಾಮಿ ನೌಕೆನೇ ಅಂತ ಕನ್ಫರ್ಮ್‌ ಇಲ್ಲ.. ನಿನ್ನೆ ರಾತ್ರಿ ಶೋಧ ಕಾರ್ಯದ ವೇಳೆ 50ರಿಂದ 100 ಮೀಟರ್‌ ಆಳದಲ್ಲಿ ಅತಿ ಹೆಚ್ಚು ಗುರುತ್ವಾಕರ್ಷಣೆಯ ವಸ್ತುವೊಂದು ಟ್ರೇಸ್‌ ಆಗಿದೆ. ಅದು ನಾಪತ್ತೆಯಾದ ಸಬ್‌ಮರೀನೇ ಆಗಿರಬಹುದು ಅಂತ ನಂಬಲಾಗಿದೆ. ಈ ನಡುವೆ ನೌಕೆಯಲ್ಲಿರೋ ಆಮ್ಲಜನಕ ಮುಗಿಯೋ ಹಂತದಲ್ಲಿದ್ದು, ಇನ್ನು ಕೆಲವೇ ಗಂಟೆಗಳಲ್ಲಿ ಕಂಪ್ಲೀಟಾಗಿ ಖಾಲಿಯಾಗಲಿದೆ. ನಾಳೆ ಬೆಳಗ್ಗೆ 3 ಗಂಟೆವರೆಗೆ ಆಮ್ಲಜನಕ ಇರಲಿದೆ. ಇದಾದ ಬಳಿಕ ಆಮ್ಲಜನಕ ಖಾಲಿಯಾಗಿ ಅದರಲ್ಲಿರೋ ಸಿಬ್ಬಂದಿಯ ಆಸೆಯನ್ನು ಬಿಡಬೇಕಾಗುತ್ತೆ. ಸೋ ಇವತ್ತು ರಕ್ಷಣೆಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ ಅಂತ ಇಂಡೋನೇಷ್ಯಾ ಸೇನೆ ತಿಳಿಸಿದೆ. ಈ ನಡುವೆ ಸಬ್‌ಮರೀನ್‌ ಇಂಧನ ಟ್ಯಾಂಕ್‌ ಡ್ಯಾಮೇಜ್‌ ಆಗಿ, ಮುಳುಗಿರುವ ಸಾಧ್ಯತೆ ಇದೆ ಅಂತ ಕೂಡ ಅನುಮಾನ ವ್ಯಕ್ತಪಡಿಸಲಾಗ್ತಿದೆ. ಜೊತೆಗೆ ಸಬ್‌ಮರೀನ್‌ ಸುಮಾರು 700 ಮೀಟರ್‌ ಆಳಕ್ಕೆ ಮುಳುಗಿರಬಹುದು ಅಂತ ಕೂಡ ಹೇಳಲಾಗ್ತಿದೆ. ಆದ್ರೆ ಅಷ್ಟು ಆಳಕ್ಕೆ ಮುಳುಗೋ ಸಾಮರ್ಥ್ಯ ಆ ಜಲಾಂತರ್ಗಾಮಿ ನೌಕೆಗೆ ಇಲ್ಲ.. 2 ದಿನಗಳ ಹಿಂದೆ ಬಾಲಿ ದ್ವೀಪದ ಬಳಿ ಸಮರಾಭ್ಯಾಸ ನಡೆಸುತ್ತಿದ್ದ ಕೆಆರ್​ಆರ್​​ ನಾನ್​​ಗಲಾ, ಮುಳುಗಲು ಪರ್ಮಿಷನ್‌ ಕೇಳಿತ್ತು. ಇದ್ರ ಮರುಕ್ಷಣವೇ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿತ್ತು. ಅದ್ರಲ್ಲಿ 53 ಮಂದಿ ಸಿಬ್ಬಂದಿ ಕೂಡ ಇದ್ರು. ಅದ್ರ ಬೆನ್ನಲ್ಲೇ ಶೋಧ ಕಾರ್ಯ ಶುರುವಾಗಿತ್ತು. ಆಸ್ಟ್ರೇಲಿಯಾ, ಅಮೆರಿಕ, ಭಾರತ, ಮಲೇಷ್ಯಾ, ಸಿಂಗಾಪುರ್‌ ಕೂಡ ಈ ನೌಕೆಯ ಪತ್ತೆಗೆ ಸಹಾಯ ಹಸ್ತ ಚಾಚಿವೆ. ಶೋಧ ಕಾ‍ರ್ಯದಲ್ಲಿ ಭಾಗಿಯಾಗಿವೆ.

ಜಲಾಂತರ್ಗಾಮಿ ನೌಕೆಗಳಲ್ಲಿ ಸಾಕಷ್ಟು ಆಮ್ಲಜನಕದ ವ್ಯವಸ್ಥೆ ಮಾಡಿರಲಾಗುತ್ತೆ. ಅದೇ ರೀತಿ ಕಾರ್ಬನ್‌ ಡೈ ಆಕ್ಸೈಡ್‌ ತಡೆಗೂ ಅಗತ್ಯವಾದ ಉಪಕರಣಗಳಿರುತ್ತವೆ.. ಆದ್ರೆ ಒಂದ್ವೇಳೆ ಆಕ್ಸಿಜನ್‌ ಸಮಸ್ಯೆ ಎದುರಾದ್ರೆ, ಅಥವಾ ಕಾರ್ಬನ್‌ ಡೈ ಆಕ್ಸೈಡ್‌ ನಿಯಂತ್ರಿಸೋ ಉಪಕರಣ ಕೆಲಸ ಮಾಡೋದು ನಿಲ್ಲಿಸಿದ್ರೆ ಅದ್ರಲ್ಲಿರೋ ಎಲ್ಲಾ ಸಿಬ್ಬಂದಿಯ ಜೀವ ಅಪಾಯದಲ್ಲಿ ಸಿಲುಕುತ್ತೆ.. ಸಬ್‌ಮರೀನ್‌ ದುರಂತಗಳು ಇಂಡೋನೇಷ್ಯಾಗೆ ಹೊಸತಾದ್ರೂ ಕೂಡ ಈ ಹಿಂದೆ ಹಲವು ಭಾರಿ ಇಂಥ ದುರಂತಗಳು ಸಂಭವಿಸಿವೆ.

2000 ಇಸವಿಯಲ್ಲಿ ರಷ್ಯಾದ ಕುರ್ಸ್ಕ್‌ ಅನ್ನೋ ಜಲಾಂತರ್ಗಾಮಿ ನೌಕೆ ಸಮರಾಭ್ಯಾಸದ ವೇಳೆ ಬ್ಯಾರೆಂಟ್ಸ್‌ ಸಮುದ್ರಲ್ಲಿ ಮುಳುಗಿತು. ಇದ್ರಲ್ಲಿದ್ದ 118 ಮಂದಿ ಸಿಬ್ಬಂದಿ ಕೂಡ ಸಾವನ್ನಪ್ಪಿದ್ರು. ನಂತರ ತನಿಖೆಯಲ್ಲಿ ಟಾರ್ಪಿಡೋ ಸ್ಫೋಟದಿಂದ ನೌಕೆ ಮುಳುಗಿರೋದು ಗೊತ್ತಾಯ್ತು. 2003ರಲ್ಲಿ ಚೀನಾದ ಚಾಂಗ್‌ಚೆಂಗ್‌ 361 ಅನ್ನೋ ಜಲಾಂತರ್ಗಾಮಿ ನೌಕೆ ಕೂಡ ಸಮರಾಭ್ಯಾಸದ ವೇಳೆ ಮುಳುಗಿತು. ಇದ್ರಲ್ಲಿದ್ದ 70 ಮಂದಿ ಸಿಬ್ಬಂದಿ ಕೂಡ ಸಾವನ್ನಪ್ಪಿದ್ರು. 2008ರಲ್ಲಿ ರಷ್ಯಾದ ಮತ್ತೊಂದು ಜಲಾಂತರ್ಗಾಮಿ ನೌಕೆ ಕೆ-152 ನೆಪ್ರಾ ನೌಕೆಯಲ್ಲಿದ್ದ 20 ಮಂದಿ ಸಿಬ್ಬಂದಿ ವಿಷಕಾರಿ ಅನಿಲದಿಂದ ಸಾವನ್ನಪ್ಪಿದ್ರು. 2017ರಲ್ಲಿ ಅರ್ಜಂಟೈನಾದ ಜಲಾಂತರ್ಗಾಮಿ ನೌಕೆಯೊಂದು 44 ಮಂದಿಯೊಂದಿಗೆ ನಾಪತ್ತೆಯಾಯ್ತು. ಅದ್ರ ಅವಶೇಷ ಒಂದು ವರ್ಷದ ಬಳಿಕ ಪತ್ತೆಯಾಗಿತ್ತು.

-masthmagaa.com

Contact Us for Advertisement

Leave a Reply