ಪಾಕಿಸ್ತಾನಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಸಹಾಯ!

masthmagaa.com:

ಪಾಕಿಸ್ತಾನದ ಜೊತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರ ಹೆಚ್ಚಿಸಲು ಚೀನಾ ಮುಂದಾಗಿದೆ. ಬಾಹ್ಯಾಕಾಶ ಕೇಂದ್ರದ ಅಭಿವೃದ್ಧಿ, ಹೆಚ್ಚೆಚ್ಚು ಉಪಗ್ರಹಗಳ ಉಡಾವಣೆ ಮಾಡೋದು ಇದ್ರ ಉದ್ದೇಶವಾಗಿದೆ. ಚೀನಾ ಬಾಹ್ಯಾಕಾಶ ಕಾರ್ಯಕ್ರಮ 2021 ಅಂತ ಹೆಸರಿರೋ ಶ್ವೇತಪತ್ರದಲ್ಲಿ ಪಾಕಿಸ್ತಾನದ ಹೆಸರನ್ನು ಹಲವಾರು ಬಾರಿ ಉಲ್ಲೇಖಿಸಲಾಗಿದೆ. ಈ ಶ್ವೇತಪತ್ರವನ್ನು ಸ್ಟೇಟ್ ಕೌನ್ಸಿಲ್ ಅಥವಾ ಕ್ಯಾಬಿನೆಟ್ ಕೌನ್ಸಿಲ್ ಜಾರಿಗೊಳಿಸಿದೆ. ಈಗಾಗಲೇ ಮಂಗಳ ಗ್ರಹ ಮತ್ತು ಚಂದ್ರನ ಯೋಜನೆಗಳನ್ನು ಚೀನಾ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅದಲ್ಲದೇ ತನ್ನದೇ ಬಾಹ್ಯಾಕಾಶ ನಿಲ್ದಾಣವನ್ನು ರೆಡಿ ಮಾಡ್ತಿದೆ. ಅದ್ರ ನಿರ್ಮಾಣ ಕಾರ್ಯ ಕೂಡ ಇದೇ ವರ್ಷ ಪೂರ್ಣಗೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ಚೀನಾ ಮತ್ತಷ್ಟು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಶೋಧನೆ ಮಾಡಲಿದೆ, ಮುಂದೆ ಸಾಗಲಿದೆ ಅಂತ ಕೂಡ ಈ ಶ್ವೇತಪತ್ರದಲ್ಲಿ ಹೇಳಲಾಗಿದೆ.

-masthmagaa.com

Contact Us for Advertisement

Leave a Reply