ಪರಂ ಮೇಲಿನ ಐಟಿ ದಾಳಿ..! ಮೋದಿ ವಿರುದ್ಧ ಗೌಡರ ಗುಡುಗು..!

ಕಾಂಗ್ರೆಸ್ ನಾಯಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮೇಲಿನ ಐಟಿ ದಾಳಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಇರುವವರೆಲ್ಲರೂ ಪ್ರಾಮಾಣಿಕರಾ..? ಬಿಜೆಪಿಯಲ್ಲಿ ಇರುವವರೆಲ್ಲಾ ಸತ್ಯವಂತರಾ..? ಬಿಜೆಪಿಯಲ್ಲಿ ಇರೋರು ಯಾರು ತಪ್ಪು ಮಾಡೇ ಇಲ್ವಾ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿಯವರು ಐಟಿ, ಇಡಿ, ಸಿಬಿಐನಂತಹ ಕೇಂದ್ರದ ಸಂಸ್ಥೆಗಳನ್ನು ತಮ್ಮ ಹಿತಕ್ಕಾಗಿ ಬಳಸಿಕೊಳ್ತಿದ್ದಾರೆ. ಪರಮೇಶ್ವರ್ ತಂದೆ ಮಾಡಿರುವ ಆಸ್ತಿ ಅದು. 50 ವರ್ಷದ ಹಿಂದೆಯೇ ಆಸ್ತಿ ಮಾಡಿದ್ದರು. ಅವರೇನು ಇವತ್ತು ಮೊನ್ನೆ ಶ್ರೀಮಂತರಾದವರಲ್ಲ ಎಂದು ಪರಮೇಶ್ವರ್ ಪರ ಹೆಚ್.ಡಿ.ದೇವೇಗೌಡ ಬ್ಯಾಟಿಂಗ್ ಮಾಡಿದ್ರು.

ಇನ್ನು ವಿಧಾನಸಭೆಗೆ ಮಾಧ್ಯಮ ನಿರ್ಬಂಧ ಕುರಿತು ಮಾತನಾಡಿದ ಅವರು, ಈ ಬಗ್ಗೆ ಸ್ಪೀಕರ್ ಗೆ ಪತ್ರ ಬರೆದಿದ್ದು, ಇದು ಅತ್ಯಂತ ದೊಡ್ಡ ದುರ್ಘಟನೆ. ಸರ್ಕಾರ ವಿರುದ್ಧ ನನ್ನ ಹೋರಾಟ ನಿಲ್ಲಲ್ಲ. ವ್ಯಕ್ತಿ ದ್ವೇಷದಿಂದ ಯಾರ ವಿರುದ್ಧವೂ ಹೋರಾಟ ಮಾಡಲ್ಲ. ಯಡಿಯೂರಪ್ಪ ಎಷ್ಟೇ ಜೋರಾಗಿ ಮಾತಾಡಿದರೂ ನಾನು ದ್ವೇಷದಿಂದ ಮಾತಾಡಲ್ಲ ಅಂತ ಹೇಳಿದ್ರು.

Contact Us for Advertisement

Leave a Reply