ಮೋದಿ ನಿವೃತ್ತಿ ಬಗ್ಗೆ ಮಹಾರಾಷ್ಟ್ರ ಸಿಎಂ ಹೇಳಿದ್ದೇನು..?

ಪ್ರಧಾನಿ ಮೋದಿ ಅವರು ಇರೋವರೆಗೆ ಯಾರೂ ಪ್ರಧಾನಿ ಹುದ್ದೆಯ ಬಗ್ಗೆ ಆಸೆ ಪಡೋದು ಕೂಡ ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಹೇಳಿದ್ದಾರೆ. ಖಾಸಗಿ ವಾಹಿಯೊಂದರ ಕಾರ್ಯಕ್ರಮದಲ್ಲಿ ಅವರಿಗೆ, ನಾಗ್ಪುರ, ಮಹಾರಾಷ್ಟ್ರದವರು ದೇಶದ ಪ್ರಧಾನಿಯಾಗಬೇಕೆಂಬುದು ಆರ್‍ಎಸ್‍ಎಸ್ ಕನಸು. 10 ವರ್ಷಗಳ ಬಳಿಕ ನೀವು ಪ್ರಧಾನಿಯಾಗುತ್ತೀರಾ ಅಂತ ಕೇಳಿದ್ರು.

ಈ ವೇಳೆ ಉತ್ತರಿಸಿದ ದೇವೇಂದ್ರ ಫಡ್ನಾವಿಸ್, ಆರ್‍ಎಸ್‍ಎಸ್ ಕನಸು ಯಾರನ್ನೋ ಪ್ರಧಾನಿ ಮಾಡೋದು ಅಲ್ಲ. ಭಾರತವನ್ನು ಜಗತ್ತಿನ ಶ್ರೇಷ್ಠ ದೇಶವನ್ನಾಗಿ ಮಾಡೋದು. ಭಾರತವನ್ನು ಬಲಿಷ್ಠ ದೇಶವನ್ನಾಗಿ ಮಾಡೋದು ಆರ್‍ಎಸ್‍ಎಸ್ ಕನಸು. ಯಾರನ್ನೋ ಪ್ರಧಾನಿ ಮಾಡಲು, ಯಾರನ್ನೋ ಸಿಎಂ ಮಾಡಲು ಆರ್‍ಎಸ್‍ಎಸ್ ಕುಳಿತಿಲ್ಲ. ಇನ್ನೊಂದು ವಿಚಾರ ಅಂದ್ರೆ ಪ್ರಧಾನಿ ಹುದ್ದೆ ಅಲಂಕರಿಸುವಂತಹ ನಾಯಕರು ಬಿಜೆಪಿಯಲ್ಲಿ ಇದ್ದಾರೆ. ಆದ್ರೆ ಎಲ್ಲಿಯವರೆಗೆ ಪ್ರಧಾನಿ ಮೋದಿ ಇದ್ದಾರೋ ಅಲ್ಲಿಯವರೆಗೆ ಬೇರೆಯವರು ಆ ಬಗ್ಗೆ ಚಿಂತಿಸಲೂ ಸಾಧ್ಯವಿಲ್ಲ. ಯಾಕೆಂದರೆ ಮೋದಿಯವರು ಆ ಹುದ್ದೆಯಲ್ಲಿರಬೇಕೆಂದು ಜನರು ಬಯಸುತ್ತಿದ್ದಾರೆ ಅಂತ ಹೇಳಿದ್ರು.

Contact Us for Advertisement

Leave a Reply