ಪವನ್‌ಕುಮಾರ್‌ ನಿರ್ದೇಶನದ ಧೂಮಂ ಸಿನಿಮಾ ನಾಳೆ ರಾಜ್ಯಾದ್ಯಂತ ರಿಲೀಸ್‌!

masthmagaa.com:

ಇದೀಗ ಧೂಮಂ ಹೆಸರಿನ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲವನ್ನ ಹೆಚ್ಚಿಸಿದೆ. ಧೂಮಂ ಚಿತ್ರ ಟ್ರೈಲರ್‌ ಯ್ಯುಟ್ಯುಬ್‌ ಟ್ರೆಂಡ್‌ ಆಗಿ ಬಿಟ್ಟಿದೆ. ಧೂಮಂ ಚಿತ್ರದಲ್ಲಿ ಮೊದಲ ಆಕರ್ಷಣೆ ಏನೂ ಅನ್ನೋರಿಗೆ ಟೈಟಲ್ ಆ ಒಂದು ಕೆಲಸ ಮಾಡುತ್ತದೆ. ಡೈರೆಕ್ಟರ್ ಪವನ್ ಕುಮಾರ್ ಹೆಸರು ಇಲ್ಲಿ ಈ ಚಿತ್ರಕ್ಕೆ ಪ್ಲಸ್ ಕೂಡ ಆಗುತ್ತಿದೆ. ಪವನ್ ಕುಮಾರ್ ಅವರ ಈ ಹಿಂದಿನ ಲೂಸಿಯಾ ಮತ್ತು ಯು ಟರ್ನ್ ಸಿನಿಮಾಗಳು ಆ ಶಕ್ತಿಯನ್ನ ತಂದುಕೊಟ್ಟಿವೆ.

ಇನ್ನು ಈ ಇನ್ನು ಧೂಮಂ ಚಿತ್ರಕ್ಕೆ ದುಡ್ಡು ಹಾಕಿರೋ ಹೊಂಬಾಳೆ ಸಂಸ್ಥೆ ಈ ಮೂಲಕ ಮಾಲಿವುಡ್‌ಗೂ ಕಾಲಿಟ್ಟಿದೆ. ಮಲೆಯಾಳಂ ಭಾಷೆಯಲ್ಲಿಯೇ ಧೂಮಂ ಸಿನಿಮಾ ತಯಾರಾಗಿದೆ. ಇದರ ಜೊತೆಗೆ ಕನ್ನಡದಲ್ಲೂ ಧೂಮಮ್ ತನ್ನದೇ ಒಂದು ಹೊಸ ಅಲೆ ಎಬ್ಬಿಸೋ ಭರವಸೆಯನ್ನ ಕೂಡ ಈಗಲೇ ಮೂಡಿಸಿದೆ. ಧೂಮಂ ಸಿನಿಮಾದ ರಿಲೀಸ್ ಡೇಟ್ ಕೂಡ ಈಗಾಗಲೇ ಅನೌನ್ಸ್ ಆಗಿದೆ. ಇದೇ ತಿಂಗಳ ಇದೇ ವಾರ ಜೂನ್ 23 ರಂದು ಧೂಮಂ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗ್ತಾ ಇದೆ.

-masthmagaa.com

Contact Us for Advertisement

Leave a Reply