ಮುದ್ದು ಮಗಳ ಪೋಟೋವನ್ನ ಹಂಚಿಕೊಂಡ ಧ್ರುವ ಸರ್ಜಾ..

masthmagaa.com:

ಮುದ್ದು ಮಗಳ ಆಗಮನದಿಂದ ಖುಷಿಯಲ್ಲಿರುವ ಧ್ರುವ, ಮಗಳು ಜನಿಸಿ 6 ತಿಂಗಳ ಬಳಿಕ ಮಗಳ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಮಗಳ ಕೈಗೆ ಮುತ್ತು ಕೊಡುತ್ತಿರುವ ಫೋಟೋ ಶೇರ್‌ ಮಾಡಿ ನನ್ನ ಮಗಳು, ಲವ್‌ ಯೂ ಮಗಳೇ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ತಾವು ಎಷ್ಟೇ ಬ್ಯುಸಿಯಲ್ಲಿದ್ದರು ಕೂಡ ಕುಟುಂಬಕ್ಕೆ ಸಮಯ ಕೊಡುವ ಧ್ರುವ ಒಳ್ಳೆಯ ಫ್ಯಾಮಿಲಿ ಮ್ಯಾನ್‌ ಎಂಬುದು ಎಲ್ಲರಿಗೂ ತಿಳಿದಿದೆ. ಕಳೆದ ವರ್ಷ ಅಕ್ಟೋಬರ್‌ 2ರಂದು ಅವರ ಪತ್ನಿ ಪ್ರೇರಣಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗಳು ಹುಟ್ಟಿದಾಗಿನಿಂದ ಇದೇ ಮೊದಲ ಬಾರಿಗೆ ಫೋಟೋವನ್ನ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಮುದ್ದು ಕಂದಮ್ಮನ ಮುಖ ಕಾಣಿಸಿಲ್ಲ. ಇದರಿಂದ ಅಭಿಮಾನಿಗಳಿಗೆ ಸ್ವಲ್ಪ ಬೇಸರ ಉಂಟಾಗಿದೆ. ಅಭಿಮಾನಿಗಳು ಕಮೆಂಟ್‌ ಬಾಕ್ಸ್‌ನಲ್ಲಿ ʼ ಮಗಳು ತುಂಬ ಕ್ಯೂಟ್‌ ಆಗಿದ್ದಾಳೆ. ಆದರೆ ಮುಖ ಕಾಣುವಂತಹ ಫೋಟೋವನ್ನ ಹಾಕಿʼ ಎಂದು ರಿಕ್ವೆಸ್ಟ್‌ ಮಾಡಿದ್ದಾರೆ.
ಧ್ರುವ ಸರ್ಜಾ ನಟನೆಯ ಪ್ಯಾನ್‌ ಇಂಡಿಯಾ ಚಿತ್ರ ʼಮಾರ್ಟಿನ್‌ʼ ಟೀಸರ್‌ ಇತ್ತೀಚೆಗಷ್ಟೆ ಬಿಡುಗಡೆ ಅಯಿತು. ಯೂಟ್ಯೂಬ್‌ನಲ್ಲಿ ಈ ಚಿತ್ರದ ಟೀಸರ್‌ನ್ನು 77 ಮಿಲಿಯನ್‌ಗಿಂತಲೂ ಹೆಚ್ಚು ಜನ ನೋಡಿದ್ದಾರೆ.

-masthmagaa.com

Contact Us for Advertisement

Leave a Reply