ಕಾಂಗ್ರೆಸ್ ಹಿರಿಯರಿಗೆ ದಿನೇಶ್ ಪತ್ನಿ ತಬು ಟಾಂಗ್..!

ಕಾಂಗ್ರೆಸ್‍ನ ಹಿರಿಯ ನಾಯಕರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ನಿ ತಬು ರಾವ್ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್‍ನಲ್ಲಿ ಯುವ ನಾಯಕರಿಗೆ ಅವಕಾಶಗಳೇ ಸಿಗುತ್ತಿಲ್ಲ. ಪಕ್ಷದಲ್ಲಿ ಯುವನಾಯಕರಿಗೆ ಅವಕಾಶ ಕೊಟ್ಟು ಬೆಳೆಸೋ ಅಗತ್ಯತೆ ಇದೆ. ಕೆಲವರು ತಮ್ಮ ಹಿತಾಸಕ್ತಿಗಾಗಿ ತಮ್ಮದೇ ಪಕ್ಷದ ಸಹೋದ್ಯೋಗಿಯನ್ನು ಸೋಲಿಸೋದ್ರಲ್ಲಿ ನಿರತರಾಗಿದ್ದಾರೆ. ಇದೇನೂ ರಹಸ್ಯವಾಗಿ ಉಳಿದಿಲ್ಲ. ರಾಜಧಾನಿಯಲ್ಲಿರೋ ನಾಯಕರು ವಾಸ್ತವತೆಯನ್ನು ಅರಿಯುತ್ತಿಲ್ಲ. ಕೇವಲ ಬೇರೆಯವರು ಹೇಳುವುದನ್ನೇ ಕೇಳಿಸಿಕೊಳ್ಳುತ್ತಾರೆ, ನಂಬುತ್ತಾರೆ ಎಂದಿದ್ದಾರೆ. ಕಾಂಗ್ರೆಸ್ ದೇಶವನ್ನು ಹೇಗೆ ಸೂಪರ್ ಪವರ್ ಮಾಡಿತು ಅನ್ನೋದನ್ನ ಮತದಾರರಿಗೆ ತಿಳಿಸಲು ಕಾಂಗ್ರೆಸ್‍ಗೆ ಸಾಧ್ಯವಾಗುತ್ತಿಲ್ಲ. ತಳಮಟ್ಟದ ಕಾರ್ಯಕರ್ತರು ಇದರಿಂದ ಗೊಂದಲದಲ್ಲಿದ್ದಾರೆ ಅಂತ ತಬು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‍ನ ಹಿರಿಯ ತಲೆಗಳಿಗೆ ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ.

Contact Us for Advertisement

Leave a Reply