ಜರ್ಮನಿಯಲ್ಲಿ ರಷ್ಯಾನ್ ಗೂಢಚರನ ಶವ? ಸತ್ತಿದ್ದು ಹೇಗೆ ಅನ್ನೋದು ನಿಗೂಢ!

masthmagaa.com:

ಕಳೆದ ತಿಂಗಳು ಜರ್ಮನಿಯ ಬರ್ಲಿನ್ ನಗರದಲ್ಲಿ ರಷ್ಯಾ ರಾಯಭಾರ ಕಚೇರಿಯ ಮುಂದೆ ಒಬ್ಬ 35 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಅದು ರಷ್ಯಾದ ಸೀಕ್ರೆಟ್ ಸರ್ವಿಸ್ ಏಜೆನ್ಸಿ FSBಯ ಏಜೆಂಟ್ Der Spiegel ಅಂತ ಜರ್ಮನಿ ಅಧಿಕಾರಿಗಳು ಹೇಳಿದ್ದಾರೆ. ಈತ ರಷ್ಯನ್ ರಾಯಭಾರ ಕಚೇರಿಯ ಮೇಲಿನ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದ ಅಂತ ಕೂಡ ಈಗ ವರದಿಯಾಗುತ್ತಿದೆ. ಆದರೆ ರಷ್ಯಾ ಈತ ಕೇವಲ ರಾಯಭಾರ ಕಚೇರಿಯ ಸಿಬ್ಬಂದಿ ಮಾತ್ರ. ಗೂಢಚರ ಅಲ್ಲ ಅಂತ ಹೇಳುತ್ತಿದೆ. ಈತನ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲು ಕೂಡ ರಷ್ಯಾ ರಾಯಭಾರ ಕಚೇರಿ ಅವಕಾಶ ಮಾಡಿಕೊಟ್ಟಿರಲಿಲ್ಲ. ಹಾಗೂ ಈತ ಕಟ್ಟಡದ ಮೇಲಿಂದ ಬಿದ್ದಿದ್ದು ಹೇಗೆ ಅನ್ನೋದು ಕೂಡ ಇನ್ನೂ ನಿಗೂಢವಾಗಿಯೇ ಉಳಿದಿದೆ.

-masthmagaa.com

Contact Us for Advertisement

Leave a Reply